ಉತ್ತಮ ಸಂಬಳ, ಲಿಖಿತ ಪರೀಕ್ಷೆ ಇಲ್ಲ, ದೇಶದ ಕೇಂದ್ರ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಅವಕಾಶ



(ನ್ಯೂಸ್‌ ಕಡಬ) newskadaba.com,ಡಿ.19 ಉತ್ತಮ ಸಂಬಳ, ಲಿಖಿತ ಪರೀಕ್ಷೆ ಇಲ್ಲ, ದೇಶದ ಕೇಂದ್ರ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಅವಕಾಶ ಇವುಗಳೆಲ್ಲ ಒಂದೇ ನೇಮಕಾತಿಯಲ್ಲಿ ಲಭ್ಯವಿವೆ. ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ತಜ್ಞರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತ ತನ್ನ ವಿವಿಧ ಶಾಖೆಗಳು ಮತ್ತು ಇಲಾಖೆಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅಧಿಸೂಚನೆಯಡಿ ಒಟ್ಟು 93 ಹುದ್ದೆಗಳು ಲಭ್ಯವಿವೆ.





ಮಾಹಿತಿ ತಂತ್ರಜ್ಞಾನ ಇಲಾಖೆ ಯಲ್ಲಿ ಒಟ್ಟು 22 ಹುದ್ದೆಗಳಿವೆ. ಇದರಲ್ಲಿ ಡೇಟಾ ಸೈಂಟಿಸ್ಟ್, ಐಟಿ ಭದ್ರತಾ ತಜ್ಞರು, ಐಟಿ ಸಿಸ್ಟಮ್ ಅಡ್ಮಿನಿಸ್ಟ್ರೇಟರ್, AI/ML ಸ್ಪೆಷಲಿಸ್ಟ್ ಹಾಗೂ ಸೈಬರ್ ಸೆಕ್ಯುರಿಟಿ ವಿಶ್ಲೇಷಕ ಹುದ್ದೆಗಳು ಸೇರಿವೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಬಿಎ, ಬಿಎಸ್ಸಿ, ಬಿಟೆಕ್/ಬಿಇ, ಎಲ್ಎಲ್ಬಿ, ಸಿಎ, ಎಲ್ಎಲ್ಎಂ, ಎಂಎಸ್ಸಿ, ಎಂಇ/ಎಂಟೆಕ್, ಎಂಬಿಎ/ಪಿಜಿಡಿಎಂ, ಎಂಸಿಎ, ಪಿಜಿಡಿಬಿಎ ಮೊದಲಾದ ಅರ್ಹತಾ ಪದವಿಗಳನ್ನು ಹೊಂದಿರಬೇಕು. ಅಧಿಸೂಚನೆಯಲ್ಲಿ ತಿಳಿಸಿದಂತೆ ಸಂಬಂಧಿತ ಕೆಲಸದ ಅನುಭವವೂ ಕಡ್ಡಾಯವಾಗಿದೆ.






ಅರ್ಜಿ ಸಲ್ಲಿಕೆ ಡಿಸೆಂಬರ್ 17ರಿಂದ ಆರಂಭವಾಗಿದ್ದು, ಜನವರಿ 6, 2026 ಸಂಜೆ 6 ಗಂಟೆಯವರೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು. ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600 ಇದ್ದರೆ, ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ರೂ.100 ಮಾತ್ರ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ತಿಂಗಳಿಗೆ ರೂ. 3.10 ಲಕ್ಷದಿಂದ ರೂ. 6 ಲಕ್ಷವರೆಗೆ ಸಂಬಳ ನೀಡಲಾಗುತ್ತದೆ.

error: Content is protected !!
Scroll to Top