ಟ್ರಂಪ್ ವಿಧಿಸಿದ ಶೇ. 50ರ ಸುಂಕ ಕೊನೆಗೊಳಿಸುವ ನಿರ್ಣಯ ಮಂಡಿಸಿದ ಅಮೆರಿಕ ಸಂಸದರು



(ನ್ಯೂಸ್ ಕಡಬ) newskadaba.com,  ಡಿ.13: ಭಾರತದ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಶೇ 50ರಷ್ಟು ಸುಂಕವನ್ನು ಕೊನೆಗೊಳಿಸುವ ನಿರ್ಣಯವನ್ನು ಅಮೆರಿಕದ ಪ್ರತಿನಿಧಿ ಸಭೆಯ ಮೂವರು ಸದಸ್ಯರು ಸದನದಲ್ಲಿ ಮಂಡಿಸಿದ್ದಾರೆ. ರಾಷ್ಟ್ರೀಯ ತುರ್ತು ಸ್ಥಿತಿಯ ನೆಪದಲ್ಲಿ ಟ್ರಂಪ್ ಭಾರತದಿಂದ ಆಮದಾಗುವ ಸರಕು ಮತ್ತು ಸೇವೆಗಳ ಮೇಲೆ ಶೇ.50ರ ಸುಂಕ ವಿಧಿಸಿದ್ದರು.ಟ್ರಂಪ್ ಘೋಷಿಸಿದ ಈ ಕ್ರಮಗಳು ಕಾನೂನುಬಾಹಿರ ಮತ್ತು ಅಮೆರಿಕದ ಉದ್ಯೋಗಿಗಳು, ಗ್ರಾಹಕರು ಮತ್ತು ದ್ವಿಪಕ್ಷೀಯ ಸಂಬಂದಕ್ಕೆ ಮಾರಕ ಎಂದು ನಿರ್ಣಯ ಮಂಡಿಸಿದ ಸಂಸದರು ಅಭಿಪ್ರಾಯಪಟ್ಟಿದ್ದಾರೆ.





ಹೌಸ್ ಆಫ್ ರೆಪ್ರೆಸೆಂಟೇಟಿವ್ ಸದಸ್ಯರಾದ ದೆಬ್ರೋ ರಾಸ್, ಮಾರ್ಕ್ ವಿಯಾಸೆ ಮತ್ತು ರಾಜಾ ಕೃಷ್ಣಮೂರ್ತಿ ಈ ನಿರ್ಣಯ ಮಂಡಿಸಿದ್ದಾರೆ. ಬ್ರೆಜಿಲ್ ನ ಮೇಲೆ ವಿಧಿಸಿದ್ದ ಇಂಥದ್ದೇ ಸುಂಕವನ್ನು ಕೊನೆಗೊಳಿಸಲು ದ್ವಿಪಕ್ಷೀಯ ಸೆನೆಟ್ ಕೈಗೊಂಡ ಕ್ರಮದ ಬಳಿಕ ಈ ನಿರ್ಣಯ ಮಂಡಿಸಲಾಗಿದ್ದು, ಆಮದು ಸುಂಕವನ್ನು ಹೇರಲು ಅಧ್ಯಕ್ಷರ ತುರ್ತು ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆ.






ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದರಿಂದ ದಂಡದ ಮಾದರಿಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ದ್ವಿಗುಣಗೊಳಿಸುವುದಾಗಿ ಆಗಸ್ಟ್ 7ರಂದು ಟ್ರಂಪ್ ಘೋಷಿಸಿದ್ದರು.

“ಭಾರತವು ಒಂದು ಪ್ರಮುಖ ಸಾಂಸ್ಕೃತಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಪಾಲುದಾರ, ಮತ್ತು ಕಾನೂನುಬಾಹಿರ ಸುಂಕಗಳು ಈಗಾಗಲೇ ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಹೆಣಗಾಡುತ್ತಿರುವ ಉತ್ತರ ಟೆಕ್ಸಸ್ ನ ಜನರ ಪಾಲಿಗೆ ತೆರಿಗೆ ಹೊರೆಯಾಗಲಿದೆ” ಎಂದು ಕಾಂಗ್ರೆಸ್ ಸದಸ್ಯ ವೆಸ್ಸಿ ಹೇಳಿದರು.

error: Content is protected !!
Scroll to Top