(ನ್ಯೂಸ್ ಕಡಬ) newskadaba.com, ಡಿ.02 ಬೆಂಗಳೂರು:- ಕ್ರಿಸಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನೆಂಟ್ ಮತ್ತು ಬೀದರ್ ನಡುವೆ ಒಂದು ಟ್ರಿಪ್ ವಿಶೇಷ ಎಕ್‌್ಸಪ್ರೆಸ್ ರೈಲು ಬಿಡುಗಡೆ ಮಾಡಿದೆ.ಡಿ.24ರಂದು ಬುಧವಾರ ರೈಲು ಸಂಖ್ಯೆ 06291 ಬೆಂಗಳೂರು ಕಂಟೋನೆಂಟ್ ಬೀದರ್ ವಿಶೇಷ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ ರಾತ್ರಿ 9:15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:30ಕ್ಕೆ ಬೀದರ್ ತಲುಪಲಿದೆ.
ಮತ್ತೊಂದೆಡೆ, ಮರಳಿ ಸಂಚರಿಸುವ 06292 ಬೀದರ್ ರೈಲು ಬೆಂಗಳೂರು ಕ್ಯಾಂಟ್ ವಿಶೇಷ ಎಕ್‌್ಸಪ್ರೆಸ್ ರೈಲು 25ರಂದು ಗುರುವಾರ ಬೀದರ್‌ನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 4ಕ್ಕೆ ಬೆಂಗಳೂರು ಕಂಟೋನೆಂಟ್ ತಲುಪಲಿದೆ.ಈ ವಿಶೇಷ ರೈಲು 22 ಬೋಗಿಗಳನ್ನು ಒಳಗೊಂಡಿರಲಿದೆ, ಇದರಲ್ಲಿ ಒಂದು ಎಸಿ 2-ಟೈರ್, ಎರಡು ಎಸಿ 3-ಟೈರ್, ಹನ್ನೊಂದು ಸ್ಲೀಪರ್ ಕ್ಲಾಸ್, ಆರು ಜನರಲ್ ಸೆಕೆಂಡ್ ಕ್ಲಾಸ್, ಮತ್ತು ಎರಡು ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ.












