(ನ್ಯೂಸ್ ಕಡಬ) newskadaba.com, ಡಿ.01 ಪುತ್ತೂರು: ನಗರದ ಪಡೀಲ್ ನ ಚಿಕನ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬದ್ರುದ್ದೀನ್ ಡಿಕೆ (27) ಕಾಣೆಯಾದ ಯುವಕ.
ಈತ ಸುಮಾರು 8 ವರ್ಷಗಳಿಂದ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನ.29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ಹೋಗಿದ್ದ ಎನ್ನಲಾಗಿದೆ. ಆ ಬಳಿಕ ಬದ್ರುದ್ದೀನ್ ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೆ ಕಾಣೆಯಾಗಿರುವುದಾಗಿ ದೂರು ನೀಡಲಾಗಿದೆ. ಪುತ್ತೂರು ನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








