ಮಂಗಳೂರು : ಬೈಕ್ ನಲ್ಲಿ ತೆರಳುತ್ತಿದ್ದಾಗ ಸೀರೆ ಬೈಕ್ ಟಯರ್ ಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟ ಮಹಿಳೆ



(ನ್ಯೂಸ್‌ ಕಡಬ) newskadaba.com,  ನ.27 ಮಂಗಳೂರು: ಮಹಿಳೆಯ ಸೀರೆ ಬೈಕ್ ಟಯರ್ ಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟ ಘಟನೆ ಸುರತ್ಕಲ್ ಬಳಿಯ ಕಾಣ ಎಂಬಲ್ಲಿ ನಡೆದಿದೆ.





ತನ್ನ ಮಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸೀರೆ ಬೈಕ್ ಟಯರ್ ಗೆ ಸಿಲುಕಿದ್ದು, ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.. ತಕ್ಷಣವೇ ಹಿಂಬದಿಯಿಂದ ಬರುತ್ತಿದ್ದ ಬಸ್ ವೊಂದರ ಚಾಲಕ ಮೊಯ್ದಿ ಎಂಬವರು ತನ್ನ ಬಸ್ ನಿಲ್ಲಿಸಿ ರಸ್ತೆಗೆ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಸಹಕರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಚಾಲಕ ಮೊಯ್ದಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.






error: Content is protected !!
Scroll to Top