(ನ್ಯೂಸ್ ಕಡಬ) newskadaba.com, ನ.24 ಹೊಸದಿಲ್ಲಿ: ಐದರಿಂದ 17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ‘ಬಾಲ’ ಅಥವಾ ನೀಲಿ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ಅನ್ನು ಕಡ್ಡಾಯವಾಗಿ ಅಪ್‌ಡೇಟ್ ಮಾಡುವುದಕ್ಕೆ ವಿಧಿಸಲಾಗುವ ಎಲ್ಲಾ ಶುಲ್ಕಗಳನ್ನು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ ಶುಕ್ರವಾರ ರದ್ದುಪಡಿಸಿದೆ.
ಕ್ರಮವಾಗಿ 5ರಿಂದ 7 ಹಾಗೂ 15-17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್‌ಗಳಿಗೆ ನಡೆಸಲಾಗುವ ಮೊದಲ ಹಾಗೂ ಎರಡನೇ ಎಂಬಿಯುಗಳು ಇನ್ನು ಮುಂದೆ ಸಂಪೂರ್ಣವಾಗಿ ಉಚಿತವಾಗಿರುತ್ತವೆ ಎಂದು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಐದು ವರ್ಷ ಪ್ರಾಯದೊಳಗಿನ ಮಗುವನ್ನು ಆಧಾರ್‌ಗೆ ನೋಂದಾಯಿಸಿಕೊಳ್ಳುವಾಗ ಅದರ ಭಾವಚಿತ್ರ, ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಹಾಗೂ ಜನ್ಮ ಪ್ರಮಾಣಪತ್ರವನ್ನು4444 3333 6666 8888 आपार-भारतीय निविष्ट पहवान प्राधिकरणಒದಗಿಸಬೇಕಾಗುತ್ತದೆ. ಆದರೆ ಈ ಪ್ರಾಯದಲ್ಲಿ ಮಕ್ಕಳಿಗೆ ಪ್ರಬುದ್ಧತೆಯಿರದ ಕಾರಣ ಅವರಿಂದ ಬಯೋಮೆಟ್ರಿಕ್ ಪಡೆದುಕೊಳ್ಳಲಾಗುವುದಿಲ್ಲ.
ಮಗುವಿಗೆ ಐದು ವರ್ಷ ವಯಸ್ಸಾದಾಗ ಅದು ಫೋಟೊ ಜೊತೆಗೆ ಬೆರಳಚ್ಚು ಮತ್ತು ಐರಿಸ್ (ಕಣ್ಣಿನ ಗುರುತು) ದತ್ತಾಂಶ ಸಹಿತಎಲ್ಲಾ ಬಯೋಮೆಟ್ರಿಕ್ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಇದನ್ನು ಎಂಬಿಯು 1 ಕರೆಯಲಾಗುತ್ತದೆ.ಆದರೆ ಆಧಾರ್ ಸಂಖ್ಯೆ ಹೊಂದಿದಾತನಿಗೆ ಹದಿನೈದು ವರ್ಷ ವಯಸ್ಸಾದಾಗ ಆತ ಬಯೋಮೆಟ್ರಿಕ್‌ಗಳನ್ನು ಮತ್ತೆ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಎಂಬಿಯು 2 ಎಂದು ಕರೆಯಲಾಗುತ್ತದೆ
5ರಿಂದ 17 ವರ್ಷದೊಳಗಿನವರಿಗೆ ನಡೆಸಲಾಗುವ ಮೊದಲ ಹಾಗೂ ಎರಡನೇ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (ಎಂಬಿಯು) ಸಂಪೂರ್ಣ ಉಚಿತವಾಗಲಿದ್ದು, 6 ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನವಾಗಲಿದೆ.
ಈವರೆಗೆ ಎಂಬಿಯುವನ್ನು ಅಪ್‌ಡೇಟ್ ಮಾಡದ ಅರ್ಹ ನೀಲಿ ಆಧಾರ್ ಕಾರ್ಡ್‌ಾರರು ತಮ್ಮ ಸಮೀಪದಲ್ಲಿರುವ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರವನ್ನು ಸಂದರ್ಶಿಸಬಹುದು. ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ವಿವರಗಳನ್ನು ಅವರು ಪಡೆಯಬಹುದಾಗಿದೆ.








