(ನ್ಯೂಸ್ ಕಡಬ) newskadaba.com, ನ.24 ಬೆಂಗಳೂರು: ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. ಕಳೆದ ವಾರದ ಅಂತ್ಯದಲ್ಲಿ ಭಾರಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ, ಈ ವಾರದ ಆರಂಭ ಸೋಮವಾರದಂದು ಚಿನ್ನದ ಬೆಲೆ ಇಳಿಕೆ ಆಗಿದೆ.
ನವೆಂಬರ್ 24 ಸೋಮವಾರದಂದು, ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,513 ರೂಪಾಯಿ ಇದ್ದು, ಇಂದು 71 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,25,130 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 710 ರೂ ಇಳಿಕೆ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 11,470 ರೂಪಾಯಿ ಇದ್ದು, ಇಂದು 65 ರೂ ಇಳಿಕೆ ಆಗಿದೆ. 10 ಗ್ರಾಂ ಬೆಲೆ 1,14,700 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 650 ರೂ ಇಳಿಕೆ ಆಗಿದೆ.
ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,510 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,25,130 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.
ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ಬೆಲೆ ಇಂದು 1 ರೂ ಇಳಿಕೆ ಆಗಿದ್ದು, ಗ್ರಾಂ ಬೆಲೆ 163 ರೂ ಆಗಿದ್ದು, ಕೆಜಿಗೆ 1,63,000 ರೂ ಇದೆ.








