(ನ್ಯೂಸ್ ಕಡಬ) newskadaba.com, ನ.19 ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಡಿಸೆಂಬರ್ ತಿಂಗಳ 28ರಂದು ನಡೆಯಲಿದ್ದು, 2024 -25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಸ್ವಜಾತಿಯ ವಿದ್ಯಾರ್ಥಿಗಳು ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ ತಮ್ಮ ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಮತ್ತು ಸ್ವ-ವಿಳಾಸದ ವಿವರವನ್ನು ತಮ್ಮ ತಮ್ಮ ವಲಯ ಅಧ್ಯಕ್ಷರಲ್ಲಿ ಅಥವಾ ಕಚೇರಿ ಕಾರ್ಯದರ್ಶಿ-ಕುಸುಮಾಧರ ರೈ (9343243257) ಯವರಲ್ಲಿ ಡಿ. 2 ರ ಮೊದಲು ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಪಿಲ್ ಪಡಿತರ ಚೀಟಿ ಹೊಂದಿದವರಿಗೆ ಅಂಕಗಳ ಪರಿಗಣನೆ ಇರುವುದಿಲ್ಲ.
ಅದೇ ರೀತಿ ಜಿಲ್ಲಾ ಮಟ್ಟದ ವಿಜೇತ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೂಡ ತಮ್ಮಸಾಧನೆಯ ವಿವರಗಳನ್ನು ನೀಡಬಹುದೆಂದು ತಿಳಿಸಿದ್ದಾರೆ.








