ಇ-ಗವರ್ನೆನ್ಸ್ ಇಲಾಖೆಯಿಂದ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಇನ್ನು ಮುಂದೆ ಎಐ ಅಟೆಂಡೆನ್ಸ್ ವ್ಯವಸ್ಥೆ



(ನ್ಯೂಸ್‌ ಕಡಬ) newskadaba.com,  ನ.15 ಬೆಂಗಳೂರು : ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿಗೆ ಹೆಸರು ಕೂಗಿ, ಅಟೆಂಡೆನ್ಸ್ ಪುಸ್ತಕದಲ್ಲಿ ಶಿಕ್ಷಕರು ಟಿಕ್ ಮಾಡುವ ಪದ್ಧತಿ ಕೆಲವೇ ದಿನಗಳಲ್ಲಿ ಇತಿಹಾಸ ಪುಟ ಸೇರಲಿದೆ. ಏಕೆಂದರೆ, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಒನ್ ಕ್ಲಿಕ್‌ ಅಟೆಂಡೆನ್ಸ್ ಪದ್ಧತಿ ಜಾರಿಗೆ ಬರುವ ದಿನಗಳು ಸನ್ನಿಹಿತವಾಗಿದೆ





ರಾಜ್ಯದ ಇ-ಗವರ್ನೆನ್ಸ್ ಇಲಾಖೆಯಿಂದ ಎಐ ಅಟೆಂಡೆನ್ಸ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದ್ದು, ನಗರದ ಮಲ್ಲೇಶ್ವರದಲ್ಲಿರುವ ಸರ್ಕಾರಿ ಶಾಲಾ-ಕಾಲೇಜಿನಲ್ಲಿ ಪ್ರಯೋಗಿಕವಾಗಿ ಬಳಸಲಾಗುತ್ತಿದೆ..ಎಐ ಹಾಜರಾತಿಯಿಂದ ಎಲ್ಲರ ಹೆಸರು ಕೂಗಿ ಟಿಕ್ ಮಾಡಲು ವ್ಯಯಿಸುವ ಸಮಯ ಉಳಿತಾಯವಾಗುತ್ತದೆ. ಬೋಧನೆಗೆ ಹೆಚ್ಚಿನ ಅವಕಾಶ ಸಿಗುತ್ತದೆ. ರಿಯಲ್ ಟೈಮ್ ಫೋಟೋ ಕ್ಲಿಕ್ಕಿಸಿಕೊಳ್ಳುವ ಕಾರಣ ಸಹಪಾಠಿಯ ಹೆಸರು ಕೂಗಿ ಹಾಜರಾತಿ ಹಾಕಿ ವಿದ್ಯಾರ್ಥಿಗಳು ಕೀಟಲೆ ಮಾಡುವುದಕ್ಕೆ ಕಡಿವಾಣ ಬೀಳುತ್ತದೆ.






ಮೊಬೈಲ್ ಫೋನ್ ಆ್ಯಪ್ ಮೂಲಕ ಎಐ ಅಟೆಂಡೆನ್ಸ್ ಕಾರ್ಯ ನಿರ್ವಹಿಸುತ್ತದೆ. ಆರಂಭದಲ್ಲಿ ಒಮ್ಮೆ ವಿದ್ಯಾರ್ಥಿಯ ಫೋಟೋ ಕ್ಲಿಕ್ಕಿಸಿಕೊಂಡರೆ ಡೇಟಾ ಆಧಾರದಲ್ಲಿ ಸ್ಟೋರ್ ಆಗುತ್ತದೆ. ನಂತರ ಆ್ಯಪ್‌ ಮೂಲಕವೇ ತರಗತಿಯ ಎಲ್ಲ ವಿದ್ಯಾರ್ಥಿಗಳ ಮುಖ ಕಾಣುವಂತೆ ಶಿಕ್ಷಕರು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು. ಏಕಕಾಲಕ್ಕೆ ಸುಮಾರು 20-30 ಮಕ್ಕಳ ಫೋಟೋ ಸೆರೆಯಾಗುವಂಥ ವ್ಯವಸ್ಥೆಯಿದೆ. ನಿಖರ ಹಾಜರಾತಿಗೆ ಎಲ್ಲರ ಮುಖ ಕಾಣುವಂತೆ ಫೋಟೋ ಸೆರೆ ಹಿಡಿಯಬೇಕಾಗುತ್ತದೆ ಎಂದು ಇ-ಗವರ್ನೆನ್ಸ್‌ನ ಮತ್ತೊಬ್ಬ ಅಧಿಕಾರಿ ಸಚಿನ್ ತಿಳಿಸಿದರು……..

error: Content is protected !!
Scroll to Top