ಸುಳ್ಯದ ಸಮೃದ್ದಿ ಎಸ್. ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್



(ನ್ಯೂಸ್‌ ಕಡಬ) newskadaba.com,  ನ.18 ಸುಳ್ಯ: ಆದ್ಯಾಸ್ಮಿ ಫಿಟ್ನೆಸ್ ಸ್ಟುಡಿಯೋ ಮತ್ತು ದೇಯೀ ಮೊಬೈಲ್ಸ್ ಸಹಯೋಗದೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನವೆಂಬರ್ 16 ರಂದು ಆಯೋಜಿಸಲಾಗಿದ್ದ ಫ್ಯಾಷನ್ ಷೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಳ್ಯ ತಾಲೂಕಿನ ಗೂನಡ್ಕದ ಸಮೃದ್ಧಿ ಎಸ್. ಟ್ರೆಡಿಷನಲ್ ಮತ್ತು ವೆಸ್ಟರ್ನ್ ರೌಂಡ್ ನಲ್ಲಿ ಮಿಂಚಿ ಪ್ರಿನ್ಸೆಸ್ ಆಫ್ ಮಲ್ನಾಡ್ ಮೊದಲ ರನ್ನರ್ ಅಪ್ ವಿಜೇತರಾಗಿ ಹೊರಹೊಮ್ಮಿದ್ದಾರೆ.





ಪ್ರಸ್ತುತ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಈಗಾಗಲೇ ವಿವಿಧ ಭಾಗಗಳಲ್ಲಿ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ.






ಸಮೃದ್ದಿ ಎಸ್. ನಗರ ಪಂಚಾಯತ್ ಉದ್ಯೋಗಿ ಆಶಾ ಬಿ.ಆರ್ ಮತ್ತು ಎಸ್.ಡಿ.ಎಂ ಉದ್ಯೋಗಿ ಸದಾನಂದ ದಂಪತಿಗಳ ಪುತ್ರಿ.

error: Content is protected !!
Scroll to Top