(ನ್ಯೂಸ್ ಕಡಬ) newskadaba.com, ನ.12 ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಉಪೇಂದ್ರ ಅವರ ಮೊಬೈಲ್ ಹ್ಯಾಕ್ (mobile hack) ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಅರೆಸ್ಟ್ ಮಾಡಲಾಗಿದೆ. ಸೈಬರ್ ಫ್ರಾಡ್ ಮಾಡಿ ಲಕ್ಷಾಂತರ ರೂ ಹಣವನ್ನು ಖದೀಮರು ದೋಚಿದ್ದರು. ಇದೀಗ ಸದಾಶಿವನಗರ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಸೆಪ್ಟೆಂಬರ್15 ರಂದು ಉಪೇಂದ್ರ ದಂಪತಿ ಮೊಬೈಲ್ ಆರೋಪಿಗಳು ಹ್ಯಾಕ್ ಮಾಡಿದ್ದರು.
ಪ್ರಿಯಾಂಕ ಉಪೇಂದ್ರ ಅವರು ಆನ್ಲೈನ್ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದರು. ಇದಾದ ನಂತರ ಪ್ರಿಯಾಂಕ ಅವರಿಗೆ ಮೊಬೈಲ್ಗೆ ಲಿಂಕ್ ಬಂದಿತ್ತು. OTP ಹೇಳುವಂತೆ ಸೈಬರ್ ಖದೀಮರು ಹೇಳಿದ್ದರು. ಪ್ರಿಯಾಂಕ ಉಪೇಂದ್ರ ಆ ಲಿಂಕ್ವನ್ನು ಕ್ಲಿಕ್ ಮಾಡಿದ್ದರು. ಆ ಕೂಡಲೇ ಪ್ರಿಯಾಂಕ ಅವರ ವಾಟ್ಸ್ಆಪ್ ಹ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಪ್ರಿಯಾಂಕಾ ಕಾಂಟೆಕ್ಟ್ನಲ್ಲಿದ್ದವರಿಗೆ 55 ಸಾವಿರ ರೂ ಹಣ ಕಳಿಸುವಂತೆ ಮೇಸೆಜ್ ಮಾಡಿದ್ದಾರೆ ಖದೀಮರು. ಈ ವೇಳೆ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್ ಮಾಡಿದ್ದರು. ಹಣ ಅಗತ್ಯವಿದೆ ಎಂದು ಪ್ರಿಯಾಂಕ ವಾಟ್ಸ್ ಅಪ್ ನಿಂದ ಹಲವರಿಗೆ ಮೆಸೇಜ್ ಕೂಡ ಕಳಿಸಿದ್ರು.
ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ನಿರತರಾಗಿರೋದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೊನೆಗೆ ಪೊಲೀಸರು ಆರೋಪಿ ವಿಕಾಸ್ ಕುಮಾರ್ ಬಂಧಿಸಿ ಕರೆತಂದಿದ್ದಾರೆ .ಸದ್ಯ ಕಸ್ಟಡಿಗೆ ಆರೋಪಿ ವಿಕಾಸ್ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಕೇಂದ್ರ ವಿಭಾಗದ ಸೈಬರ್ ಹಾಗೂ ಸದಾಶಿವನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.












