ಚುನಾವಣೆ: ಬೆಂಗಳೂರು ಮತ್ತು ಬಿಹಾರದ ನಗರಗಳನ್ನು ಸಂಪರ್ಕಿಸುವ ವಿಶೇಷ ರೈಲುಗಳ ಸಂಚಾರ



(ನ್ಯೂಸ್ಕಡಬ) newskadaba.com,  ನ.06 ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ರೈಲ್ವೆ, ಬೆಂಗಳೂರಿನಿಂದ ಬಿಹಾರಕ್ಕೆ ವಿಶೇಷ ರೈಲುಗಳನ್ನು ಸಂಚರಿಸಲಿದೆ.





ಬಿಹಾರದಿಂದ ಹೊರಡುವ ರೈಲು






ರೈಲು ಸಂಖ್ಯೆ 03403 ನಾಳೆ ನವೆಂಬರ್ 7 ರಂದು ರಾತ್ರಿ 10.30 ಕ್ಕೆ ಭಾಗಲ್ಪುರದಿಂದ ಹೊರಟು ನವೆಂಬರ್ 9 ರಂದು ಕೆಆರ್ ಪುರಂ ಮತ್ತು ಎಸ್‌ಎಂವಿಟಿ ಬೆಂಗಳೂರು ಮೂಲಕ ರಾತ್ರಿ 11.50 ಕ್ಕೆ ಯಶವಂತಪುರ ತಲುಪಲಿದೆ.

ಬೆಂಗಳೂರಿನಿಂದ ಹೊರಡುವ ರೈಲು

ರೈಲು ಸಂಖ್ಯೆ 03404 ನವೆಂಬರ್ 10 ರಂದು ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು ನವೆಂಬರ್ 12 ರಂದು ಬೆಳಿಗ್ಗೆ 7.30 ಕ್ಕೆ ಯಲಹಂಕ ಮೂಲಕ ಭಾಗಲ್ಪುರ ತಲುಪಲಿದೆ.

error: Content is protected !!
Scroll to Top