ನಂದಿನ ತುಪ್ಪದ ಏಕಾಏಕಿ 90 ರೂ. ಏರಿಕೆ..!



(ನ್ಯೂಸ್‌ ಕಡಬ) newskadaba.com,  ನ.05:  ಒಂದು ಕಡೆ ದಿನನಿತ್ಯದ ವಸ್ತುಗಳ ಬೆಲೆಏರಿಕೆಯಿಂದ ಜನರು ಏದುಸಿರು ಬೀಡುತ್ತೀರುವ ಸಂದರ್ಭದಲ್ಲೇ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯೂ ನಂದಿನ ತುಪ್ಪದ ಏಕಾಏಕಿ 90 ರೂ. ಏರಿಕೆ ಮಾಡಿದೆ.





ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.ಈ ಹಿಂದೆ 1 ಕೆಜಿ ತುಪ್ಪಕ್ಕೆ 610 ರೂ. ಇತ್ತು, ಸದ್ಯ 90 ರೂ. ಏರಿಕೆಯಿಂದ 700 ರೂ.ಗೆ ಏರಿಕೆಯಾಗಿದೆ. ತುಪ್ಪ ಹೊರತುಪಡಿಸಿ ಇತರೇ ನಂದಿನಿ ಉತ್ಪನ್ನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.






error: Content is protected !!
Scroll to Top