ಶುದ್ಧ ನೀರಿನ ಘಟಕದಲ್ಲಿ ಏಕರೂಪ ದರ



(ನ್ಯೂಸ್ಕಡಬ) newskadaba.com,  .03: ಬೆಂಗಳೂರು ಜಲಮಂಡಳಿಯು ನಗರದಲ್ಲಿರುವ ಶುದ್ಧ ನೀರಿನ ಘಟಕಗಳಿಂದ ಕ್ಯೂ ಆರ್‌ಕೋಡ್ ಸ್ಕ್ಯಾನಿಂಗ್ ಮೂಲಕ ಅಥವಾ ಪ್ರೀಪೇಯ್ಡ್‌ ಕಾರ್ಡ್ ಮೂಲಕ ನೀರು ಪಡೆಯುವ ಹಾಗೂ ಏಕರೂಪ ದರ ನಿಗದಿ ಸಂಬಂಧ ಯೋಜನೆಯನ್ನು ರೂಪಿಸಿದೆ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿ ನಿರ್ವಹಿಸಲು ಜಲಮಂಡಳಿ ಮುಂದಾಗಿದ್ದು, ವರ್ಷದ ಹಿಂದೆಯೇ ಬಿಬಿಎಂಪಿಯಿಂದ ವಶಕ್ಕೆ ಪಡೆದಂತಹ ಶುದ್ದ ನೀರಿನ ಘಟಕಗಳ ನಿರ್ವಹಣಾ ಸ್ವರೂಪವನ್ನೇ ಬದಲಾಯಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಟೆಂಡರ್ ಕರೆಯಲು ಮುಂದಾಗಿದೆ.







ಬಿಬಿಎಂಪಿ ನಿರ್ವಹಿಸುತ್ತಿದ್ದ ಶುದ್ಧ ನೀರಿನ ಘಟಕಗಳನ್ನು ಸ್ಥಳೀಯವಾಗಿ ನಿರ್ವಹಿಸುತ್ತಿದ್ದರೂ ಆದಾಯದ ಸ್ವರೂಪದ ಮಾಹಿತಿ ಕೊರತೆಯಿತ್ತು. ಜತೆಗೆ ವಿದ್ಯುತ್‌ ಸಂಪರ್ಕವೂ ಸರಿಯಾಗಿ ಇರಲಿಲ್ಲ. ನೀರು ಶುದ್ದೀಕರಣದ ನಿಖರ ಮಾಹಿತಿಯೂ ಗ್ರಾಹಕರಿಗೆ ಸಿಗುತ್ತಿರಲಿಲ್ಲ. ಈ ಕಾರಣದಿಂದಲೇ ಶುದ್ಧ ನೀರಿನ ಘಟಕಗಳ ನಿರ್ವಹಣೆಗೆ ಹೊಸ ರೂಪ ನೀಡುವ ಚಟುವಟಿಕೆ ಶುರುವಾಗಿದೆ. ಗ್ರಾಹಕರಿಗೂ ನಿರಂತರ, ಶುದ್ಧ ನೀರು ಸಿಗಲಿದೆ. ಏಕರೂಪದ ದರ ನಿಗದಿ ಮಾಡುತ್ತಿದ್ದು, ನಾಣ್ಯ ಹಾಕುವ ಪ್ರಮೇಯವೂ ಇರುವುದಿಲ್ಲ. ಜಲಮಂಡಳಿ ರೂಪಿಸುವ ಕಾರ್ಡ್ ಬಳಸಿಕೊಂಡು ಇಲ್ಲವೇ ಕ್ಯೂ ಆರ್ ಕೋಡ್ ಬಳಸಿ ಸುಲಭವಾಗಿ ನೀರು ಪಡೆಯಬಹುದು. ಇದಕ್ಕಾಗಿಯೇ ಆಟೋಮೇಷನ್ ತಂತ್ರಜ್ಞಾನ ಬಳಸುವುದಕ್ಕೆ ಟೆಂಡರ್ ಕರೆಯಲಾಗಿದೆ. 10 ಕೋಟಿ ರೂ. ವೆಚ್ಚ ಮಾಡುವ ಮೂಲಕ ಶುದ್ಧ ಕುಡಿಯುವ ನೀರಿನ ಎಲ್ಲ ಘಟಕಗಳ ದುರಸ್ತಿ ಮಾಡಲಾಗುತ್ತದೆ.






error: Content is protected !!
Scroll to Top