(ನ್ಯೂಸ್ ಕಡಬ) newskadaba.com, ಅ.25 ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ಕರೆ ಮಾಡಿ ೪೨,೦೦,೧೫೦ ರು. ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರುದಾರ ಮಹಿಳೆಗೆ ಅ.೭ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಮುಂಬಯಿ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುವುದಾಗಿ ತಿಳಿಸಿದ್ದಾನೆ.
ನಿಮ್ಮ ಹೆಸರಿನಲ್ಲಿ ಐಡಿ ಕಾರ್ಡ್ನಲ್ಲಿ ಸಿಮ್ ಖರೀದಿಸಿ ಅದರಿಂದ ವಂಚನೆಯ ಕರೆ ಸಾರ್ವಜನಿಕರಿಗೆ ಅನುಮಾನಾಸ್ಪದ ಲಿಂಕ್ ಗಳನ್ನು ಕಳುಹಿಸಲಾಗಿದೆ. ಕೂಡಲೇ ಮುಂಬಯಿಗೆ ಬರಬೇಕು ಎಂದು ತಿಳಿಸಿದ್ದಾನೆ. ಮುಂಬಯಿಗೆ ಬರಲು ಆಗುವುದಿಲ್ಲ ಎಂದು ತಿಳಿಸಿದಾಗ ಅವರಿಂದ ಲೆಟರ್ ಬರೆಯಿಸಿಕೊಂಡು ಅದನ್ನು ವಾಟ್ಸ್‌ಆ?ಯಪ್ ಮೂಲಕ ಇನ್ನೊಂದು ಸಂಖ್ಯೆಗೆ ಕಳುಹಿಸುವಂತೆ ಸೂಚಿಸಿದ್ದಾನೆ.
ಅನಂತರ ವಾಟ್ಸ್‌ಆ?ಯಪ್ನಲ್ಲಿ ವೀಡಿಯೋ ಕರೆಯೊಂದು ಬಂದಿದ್ದು, ಅದನ್ನು ಕಾನ್ಫರೆನ್ಸ್ ಮೂಲಕ ಸಿ.ಬಿ.ಐ, ಐಪಿಎಸ್ ಆಫೀಸರ್, ಆರ್ ಬಿ ಐ ಮತ್ತು ಸುಪ್ರಿಂ ಕೋರ್ಟ್ ಜಡ್ಜ್ ಗೆ ಎನ್ನುವ ವ್ಯಕ್ತಿಗಳಿಗೆ ಸಂಪರ್ಕಿಸಿದ್ದಾರೆ. ಅದರಲ್ಲಿದ್ದ ವ್ಯಕ್ತಿಗಳು ವೈಯಕ್ತಿಕ ವಿವರ, ಬ್ಯಾಂಕ್ ವಿವರ, ಬಾಕಿ ಮೊತ್ತ ಎಲ್ಲವನ್ನು ವಿಚಾರಿಸಿದ್ದಾರೆ.
ಮರುದಿನ ಕರೆ ಮಾಡಿದ ವ್ಯಕ್ತಿ ಬ್ಯಾಂಕ್ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿ, ಎಲ್ಲ ಹಣ ವರ್ಗಾಯಿಸುವಂತೆ ಹಾಗೂ ಅದನ್ನು ವಾಪಾಸು ಕಳುಹಿಸುವುದಾಗಿ ತಿಳಿಸಿದ್ದಾನೆ.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಮೋಸದಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.








