(ನ್ಯೂಸ್ ಕಡಬ) newskadaba.com, ಅ..24 : ಗ್ಯಾಸ್ ಗೀಸರ್ನಲ್ಲಿ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಕುಟುಂಬದ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ಜರುಗಿದೆ.ಪಿರಿಯಾಪಟ್ಟಣದ ಬೆಟ್ಟದಪುರದ ನಿವಾಸಿಯಾದ ಅಲ್ತಾಫ್ ಪಾಷಾ ಅವರ ಎರಡನೇ ಮಗಳು ಗುಲ್ಪಮ್ ತಾಜ್(23) ಮತ್ತು ನಾಲ್ಕನೇ ಮಗಳಾದ ಸಿವ್ರಾನ್ ತಾಜ್(21) ಸಾವನ್ನಪ್ಪಿರುವ ನತದೃಷ್ಟರಾಗಿದ್ದಾರೆ.
ಬೆಟ್ಟದಪುರದಿಂದ ಪಿರಿಯಾಪಟ್ಟಣದ ಜೋನಿಗೆರಿ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ಅಲ್ತ್‌ಾ ಪಾಷಾ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊನ್ನೆ ರಾತ್ರಿ 7 ಗಂಟೆ ಸುಮಾರಿನಲ್ಲಿ ಇಬ್ಬರು ಸಹೋದರಿಯರು ಸ್ನಾನದ ಮನೆಗೆ ಏಕಕಾಲಕ್ಕೆ ತೆರಳಿದ್ದರು.
ಆ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಆನ್ ಮಾಡಿದ ತಕ್ಷಣ ಅದರಿಂದ ಬಿಡುಗಡೆಯಾದ ಅನಿಲ ಕಾರ್ಬನ್ ಮೊನಾಕ್ಸೈಡ್ ಪಾಯಿಸನ್ ಸೇಕೇಶನ್ ಆದ್ದರಿಂದ ಉಸಿರಾಡಲು ತೊಂದರೆ ಉಂಟಾಗಿ ವಿಷ ಅನಿಲ ಸೇವನೆಯಿಂದ ಸ್ಥಳದಲ್ಲಿ ಬಿದ್ದಿದ್ದಾರೆ.ಕುಟುಂಬದವರು ಗಮನಿಸಿ ಇವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಇಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ನಂತರ ಇಬ್ಬರು ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಕುಟುಂಬಸ್ಥರು ಬೆಟ್ಟದಪುರದ ಗ್ರಾಮದಲ್ಲಿ ಇವರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.












