(ನ್ಯೂಸ್ ಕಡಬ) newskadaba.com, ಅ.21 ದೀಪಾವಳಿ ಹಬ್ಬಕ್ಕೆಂದು ಚಿನ್ನ ಖರೀದಿಸಲು ಆಲೋಚಿಸಿದವರಿಗೆ ಇಂದು ಶಾಕ್ ಎದುರಾಗಿದೆ. ಕಳೆದೆರಡು ದಿನಗಳಿಂದ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಎಂದು ಮತ್ತೆ ಏರಿಕೆ ಕಂಡಿದೆ. ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಏರಿಕೆ ಕಂಡು ಬಂದಿದ್ದು, 12,170 ರೂ. ಗೆ ತಲುಪಿದೆ. 24 ಕ್ಯಾರಟ್ 1 (Gold Price) ಗ್ರಾಂ ಚಿನ್ನದ ದರದಲ್ಲಿ 208 ರೂ. ಏರಿಕೆಯಾಗಿ, 13,277 ರೂ ಆಗಿದೆ. 22 ಕ್ಯಾರಟ್ನ 8 ಗ್ರಾಂ ಚಿನ್ನ 97,360 ಬಾಳಿದರೆ, 10 ಗ್ರಾಂಗೆ ನೀವು 1,21,700 ಹಾಗೂ 100 ಗ್ರಾಂಗೆ 12,17,000 ನೀಡಬೇಕಾಗುತ್ತದೆ. 24 ಕ್ಯಾರಟ್ನ 8 ಗ್ರಾಂ ಚಿನ್ನಕ್ಕೆ 1,06,216 ಆದರೆ, 10 ಗ್ರಾಂಗೆ ನೀವು 1,32,770 ಹಾಗೂ 100 ಗ್ರಾಂಗೆ 13,27,700 ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | 12,170 ರೂ | 13,277 ರೂ |
| ಮುಂಬೈ | 12,170 ರೂ | 13,277 ರೂ |
| ದಿಲ್ಲಿ | 12,170 ರೂ | 13,277 ರೂ |
| ಕೋಲ್ಕತಾ | 12,170 ರೂ | 13,277 ರೂ |
| ಹೈದರಾಬಾದ್ | 12,170 ರೂ | 13,277 ರೂ |
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 178 ರೂ. ಇದ್ದರೆ, 8 ಗ್ರಾಂಗೆ 1,424 ಹಾಗೂ 10 ಗ್ರಾಂಗೆ 1,780 ರೂ. ಮತ್ತು 1 ಕೆಜಿಗೆ 1,78,000 ರೂ. ಇದೆ.












