(ನ್ಯೂಸ್ ಕಡಬ) newskadaba.com, ಅ.21 ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಸಾರ್ವಜನಿಕ ಶಾಲೆಗಳ (ಕೆಪಿಎಸ್) ಶೈಕ್ಷಣಿಕ, ಮೂಲಸೌಕರ್ಯ ಮತ್ತು ಹಣಕಾಸಿನ ವಿಷಯದಲ್ಲಿ ಅವುಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿಯನ್ನು ಶೀಘ್ರವೇ ರಚಿಸಲಿದೆ.
ಬೆಂಗಳೂರಿನಲ್ಲಿ ಮಾತನಾಡಿಗ ಅವರು, ಶಾಲೆಗಳು, ಅವುಗಳ ಆಡಳಿತ ಮತ್ತು ಶಿಕ್ಷಕರ ವರ್ಗಾವಣೆ ಮೇಲ್ವಿಚಾರಣೆ ಮಾಡಲು ಯಾವುದೇ ಆಡಳಿತ ಮಂಡಳಿಗಳಿಲ್ಲ ಎಂದು ತಿಳಿಸಿದ್ದಾರೆ. ಕೆಪಿಎಸ್ ಶಾಲೆಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿಯು ಅಗತ್ಯವಿದೆ. ಇಷ್ಟು ವರ್ಷಗಳಲ್ಲಿ, ಕೆಪಿಎಸ್ ಶಾಲೆಗಳಿಗೆ ಯಾವುದೇ ಆಡಳಿತ ಮಂಡಳಿ ಇರಲಿಲ್ಲ.
ಆಡಳಿತ ಮಂಡಳಿಯಲ್ಲಿ ಪಿಯು ಕಾಲೇಜಿನ ಪ್ರಾಂಶುಪಾಲರು, ಕೆಪಿಎಸ್ನ ಪ್ರಸ್ತುತ ವೇತನ ವಿತರಣಾ ಅಧಿಕಾರಿ, ಅಧ್ಯಕ್ಷರು, ಪ್ರೌಢಶಾಲೆ ಅಥವಾ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರು ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಶಾಲೆಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳಲು ಆಡಳಿತ ಮಂಡಳಿಯು ಕನಿಷ್ಠ ಎರಡು ವಾರಗಳಲ್ಲಿ ಒಮ್ಮೆಯಾದರೂ ಸಭೆ ಸೇರುವಂತೆ ನಿರ್ದೇಶಿಸಲಾಗಿದೆ.
ಆಡಳಿತ ಮಂಡಳಿಯ ಜೊತೆಗೆ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಇದೆ. ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ SDMC ರಚಿಸುವುದು ಕಡ್ಡಾಯವಾಗಿದೆ ಮತ್ತು ವಿಲೀನಗೊಂಡ ಶಾಲೆಗಳ ಹಿಂದಿನ SDMC ಯಿಂದ ಕನಿಷ್ಠ ಇಬ್ಬರು ಸದಸ್ಯರನ್ನು ಸೇರಿಸಬೇಕು ಎಂದು ಅವರು ಹೇಳಿದರು.








