ಬೀದಿನಾಯಿಗಳ ದಾಳಿ- ಬಾಲಕಿಗೆ ಗಾಯ



(ನ್ಯೂಸ್ ಕಡಬ) newskadaba.com ಅ. 16. ಬೀದಿ ನಾಯಿಯೊಂದು ಬಾಲಕಿ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ನ ಕಾನಮೈದಗುರಿ ಎಂಬಲ್ಲಿ ನಡೆದಿದೆ.





ಗಾಯಗೊಂಡ ಬಾಲಕಿಯನ್ನು ಸುರತ್ಕಲ್‌ ಕಾನ ಮೈಂದಗುರಿ ನಿವಾಸಿ ಹೈದರ್ ಅಲಿ ಎಂಬವರ‌ ಮಗಳು ರಿದಾ ಫಾತಿಮ (9) ಎಂದು ಗುರುತಿಸಲಾಗಿದೆ‌. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.






ರಿದಾ ಫಾತಿಮ ಬುಧವಾರದಂದು ಸಂಜೆಯ ವೇಳೆ‌ ಮನೆ ಬಳಿಯ ಅಂಗಡಿಗೆ ಹೋಗುತ್ತಿದ್ದ ಸಂದರ್ಭ ಬೀದಿನಾಯಿಗಳು ಜಗಳ ಮಾಡಿಕೊಂಡು ಅಲ್ಲಿಗೆ ಬಂದಿವೆ. ನಾಯಿಗಳ ಜಗಳ‌ ಕಂಡು ಹೆದರಿದ ಬಾಲಕಿ ಮನೆಗೆ ಹಿಂದಿರುಗಿ ಓಡುವ ಭರದಲ್ಲಿ ಕೈಯ್ಯಲ್ಲಿದ್ದ ಹಣ ಕೆಳಗೆ ಬಿದ್ದಿದೆ. ಅದನ್ನು ಹೆಕ್ಕುವಷ್ಟರಲ್ಲಿ ನಾಯಿಗಳ‌ ಹಿಂಡು ಬಾಲಕಿಯ ಮೇಲೆ ದಾಳಿ ಮಾಡಿದೆನ್ನಲಾಗಿದೆ. ದಾಳಿಯಿಂದ ಬಾಲಕಿಯ ಕೈ, ಕಾಲಿಗೆ ಕಚ್ಚಿದ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

error: Content is protected !!
Scroll to Top