ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ-ಕೆನಡಾ ಪ್ರಜೆಗಳ ಸುಲಿಗೆ, 16 ಮಂದಿ ಆರೋಪಿಗಳ ಬಂಧನ



(ನ್ಯೂಸ್ಕಡಬ) newskadaba.com,  .15: ಬೆಂಗಳೂರಿನಲ್ಲಿ ಕುಳಿತು ಡಿಜಿಟಲ್ ಅರೆಸ್ಚ್ ಮೂಲಕ ಅಮೆರಿಕಾ ಹಾಗೂ ಕೆನಡಾ ಜನರನ್ನು ವಂಚಿಸುತ್ತಿದ್ದ ಜಾಲವೊಂದನ್ನು ನಗರ ಪೊಲೀಸರು ಬೇಧಿಸಿದ್ದು, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಕಲಿ ಬಿಪಿಒ ಸಂಸ್ಥೆಯ ಇಬ್ಬರು ಮಹಿಳೆಯರು ಸೇರಿದಂತೆ 16 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.







ಬಂಧಿತರನ್ನು ಎ ಫ್ರಾನ್ಸಿಸ್ (29), ಆರ್ ಕಾರ್ತಿಕ್ ರಾಜ್ ವಾದ್ಯನಂ (25), ಆರ್ ಸುನಿಲ್ (30), ಎ ಅರವಿಂದ್ ಅಣ್ಣಿ ಪೂಜಾರಿ (31), ಎಲ್ ಇಂದರ್ ಲಾಲ್ಮಣಿ ಯಾದವ್ (31), ಪಿ ರೋಹನ್ (28), ಆರ್ ರಿಶಿತ್ ರಮೇಶ್ ಸಾಲಿಯನ್ (23), ಮಹಾರಾಷ್ಟ್ರದ ಪಿ ಗುರು ಪ್ರಸನ್ನ (32), ಎಫ್ ಮಿನೋಟ್ ಕಂಕೈ (32), ಆರ್ ರೆಮಿಸನ್ ಬಾಮನ್ (30), ಕೆ ಫಾನಿ ಲೇಭಾ ನಂಗ್ಜಿ (27), ಮೇಘಾಲಯದ ಎಫ್ ಎಲ್ಜಿಬಾ ಮೇರಿ ಮಾರ್ಬನಿಂಗ್ (23), ಒಡಿಶಾದ ಬಿ ರಾಕೇಶ್ ಕುಮಾರ್ ಸಿಂಗ್ (29), ಮಧ್ಯಪ್ರದೇಶದ ಎಸ್ ರಾಮಕೃಷ್ಣ ಸೋನಿ (43), ಪಶ್ಚಿಮ ಬಂಗಾಳದ ಪಿ ಪ್ರಿಯಾಂಕಾ ಗುರುಂಗ್ (24) ಮತ್ತು ಗುಜರಾತ್‌ನ ಜಿ ಮಾಧೇವ್ ಸಿಂಗ್ (28) ಎಂದು ಗುರ್ತಿಸಲಾಗಿದೆ.






16 ಆರೋಪಿಗಳಲ್ಲಿ ಎಂಟು ಮಂದಿ ಮಹಾರಾಷ್ಟ್ರದವರು, ನಾಲ್ವರು ಮೇಘಾಲಯದವರು ಮತ್ತು ಒಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ತಲಾ ಒಬ್ಬರಿದ್ದಾರೆ.

ಆರೋಪಿಗಳು ಇಂಟರ್ನೆಟ್ ಕರೆಗಳ ಮೂಲಕ ಜನರನ್ನು ವಂಚಿಸುತ್ತಿದ್ದರು” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

error: Content is protected !!
Scroll to Top