ಮಂಗಳೂರು ಕೊಡಿಯಲ್‌ಬೈಲ್ ನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಸಂಭ್ರಮಾಚರಣೆ



(ನ್ಯೂಸ್ಕಡಬ) newskadaba.com,  ಸೆ.15 ಮಂಗಳೂರು : ‘ಸುಗ್ಗಿಹಬ್ಬ’ ಎಂದು ಕರೆಯಲ್ಪಡುವ, ಸಮಾನತೆ, ಸಂತೋಷ ಮತ್ತು ಐಕ್ಯತೆಗೆ ಪ್ರತೀಕವಾದ ಓಣಂ ಆಚರಣೆಯನ್ನು ಮಂಗಳೂರು ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.





ಈ ಕಾರ್ಯಕ್ರಮವನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆಯಾದ ಡಾ.ಉಷಾಪ್ರಭಾ ಎನ್ ನಾಯಕ್  ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.






ಈ ಓಣಂ ಆಚರಣೆಯ ಪ್ರಯುಕ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವರ್ಣರಂಜಿತ ಪೂಕಳಂ ಅನ್ನು ರಚಿಸಿದರು. ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಬಂದ ಉಪನ್ಯಾಸಕರು ಪೂಕಳಂನ ಸುತ್ತ ತಿರುವಾದಿರ ನೃತ್ಯವನ್ನು ಮಾಡಿದ್ದು, ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು.

ಈ ಕ್ಷಣದಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರ ಭಟ್ ಹಾಗೂ ಉಪನ್ಯಾಸಕ ವೃಂದದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!
Scroll to Top