ಬೆಂಗಳೂರು: ಮೆಟ್ರೋ ರೈಲಿನಲ್ಲಿ ಕೇವಲ 20 ನಿಮಿಷದಲ್ಲಿ ಜೀವಂತ ಹೃದಯ ರವಾನೆ – ಮತ್ತೊಂದು ದಾಖಲೆ



(ನ್ಯೂಸ್‌ ಕಡಬ) newskadaba.com,  ಸೆ.13 ಬೆಂಗಳೂರು: ಕೇವಲ 20 ನಿಮಿಷದಲ್ಲಿ ಜೀವಂತ ಹೃದಯ ರವಾನೆ ,ಬೆಂಗಳೂರು ಮೆಟ್ರೋ ಮತ್ತೊಂದು ದಾಖಲೆ ನಿರ್ಮಿಸಿ  ಮೆಚ್ಚುಗೆಗೆ ಪಾತ್ರವಾಗಿದೆ.







ನಿರ್ಣಾಯಕ ಹೃದಯ ಕಸಿಗಾಗಿ ಗುರುವಾರ ರಾತ್ರಿ 11 ಗಂಟೆಗೆ ಬೆಂಗಳೂರು ಮೆಟ್ರೋ ರೈಲಿನಲ್ಲಿ ಜೀವಂತ ಹೃದಯವನ್ನು ದಾಖಲೆಯ ಸಮಯದಲ್ಲಿ ಸಾಗಾಟ ಮಾಡಿದೆ.






ಸೆಪ್ಟೆಂಬರ್ 11, 2025 ರ ರಾತ್ರಿ, ಯಶವಂತಪುರದಿಂದ ಮಂತ್ರಿ ಸ್ಕ್ವೇರ್‌ವರೆಗೆ ಜೀವಂತ ಹೃದಯ ಸಾಗಿಸುವ ಕಾರ್ಯಾಚರಣೆ ಯಶಸ್ವಿಯಾಗಿ ಸಂಪೂರ್ಣಗೊಂಡು ಸಾರ್ವಜನಿಕ ಮತ್ತು ವೈದ್ಯಕೀಯ ವಲಯಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

ಸಂಪೂರ್ಣ ಕಾರ್ಯಾಚರಣೆ ಸೆಪ್ಟೆಂಬರ್ 11 ರಾತ್ರಿ 11:01 ರಿಂದ 11:21 ರವರೆಗೆ ನಡೆದಿದ್ದು, ಸ್ಪರ್ಶ ಆಸ್ಪತ್ರೆಯಿಂದ ಹೃದಯವನ್ನು ಮಂತ್ರಿ ಸ್ಕ್ವೇರ್‌ನಲ್ಲಿರುವ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು. 6.7 ಕಿಲೋಮೀಟರ್ ದೂರವನ್ನು ಕೇವಲ 20 ನಿಮಿಷಗಳಲ್ಲಿ ಮುಗಿಸುವ ಈ ಕಾರ್ಯಾಚರಣೆಗೆ BMRCL ಭದ್ರತಾ ಸಿಬ್ಬಂದಿ ಮತ್ತು ಮೆಟ್ರೋ ಸಿಬ್ಬಂದಿ ಸಂಘಟಿತ ಸಹಕಾರ ನೀಡಿದರು.

error: Content is protected !!
Scroll to Top