(ನ್ಯೂಸ್ ಕಡಬ) newskadaba.com, ಸೆ.12 ಬೆಂಗಳೂರು: ಇನ್ನೊಂದು ವಾರದಲ್ಲಿ ನಾಡಹಬ್ಬ ದಸರಾ ಬರಲಿದೆ. ದಸರಾ ಹಬ್ಬದಲ್ಲಿ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಊರುಗಳಿಗೆ, ಪ್ರವಾಸಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ (South Western Railway) ಹಲವು ಭಾಗಗಳಿಗೆ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಿದೆ.
ಯಶವಂತಪುರ-ಮಡಗಾಂವ್-ಯಶವಂತಪುರ ಮತ್ತು ಬೆಂಗಳೂರು-ಬೀದರ್-ಬೆಂಗಳೂರಿಗೆ ಒಂದು ಟ್ರಿಪ್ನಲ್ಲಿ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚರಿಸಲಿವೆ.
ರೈಲು ಸಂಖ್ಯೆ 06249/06250 ಯಶವಂತಪುರ-ಮಡಗಾಂವ್-ಯಶವಂತಪುರ ಎಕ್ಸ್ಪ್ರೆಸ್ ವಿಶೇಷ ರೈಲು (1ಟ್ರಿಪ್)
ರೈಲು ಸಂಖ್ಯೆ (06249) ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 30 ರಂದು ಮಧ್ಯಾಹ್ನ 12 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 05:30 ಗಂಟೆಗೆ ಮಡಗಾಂವ್ ತಲುಪಲಿದೆ. ರೈಲು ಸಂಖ್ಯೆ (06250) ಮಡಗಾಂವ್-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 1 ರಂದು ಬೆಳಿಗ್ಗೆ 06:30 ಗಂಟೆಗೆ ಮಡಗಾಂವ್ನಿಂದ ಹೊರಟು, ಅದೇ ದಿನ ರಾತ್ರಿ 11:40 ಗಂಟೆಗೆ ಯಶವಂತಪುರ ತಲುಪಲಿದೆ.
ಈ ರೈಲು 16 ಬೋಗಿಗಳನ್ನು (10 ಸ್ವೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು) ಒಳಗೊಂಡಿದೆ.













