ಕೂಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆ ಮೃತ್ಯು -ಸಾರ್ವಜನಿಕರ ಆಕ್ರೋಶ



(ನ್ಯೂಸ್‌ ಕಡಬ) newskadaba.com ಸೆ. 09. ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೋರ್ವರು ದುರ್ಮರಣಕ್ಕೀಡಾದ ಘಟನೆ ಕೂಳೂರಿನಲ್ಲಿ ನಡೆದಿದೆ.





ಮೃತ ಮಹಿಳೆಯನ್ನು ಮಾಧವಿ ಎಂದು ಗುರುತಿಸಲಾಗಿದೆ. ಅವರು ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿನ ಬೃಹತ್ ಗುಂಡಿಗೆ ಬಿದ್ದಿದ್ದು, ಅದೇ ಸಮಯದಲ್ಲಿ ಹಿಂದಿನಿಂದ ಬಂದ ಮೀನು ತುಂಬಿದ ಟ್ರಕ್ ಅವರ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.






ಈ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಅವರು ಮೂಲ್ಕಿಯಿಂದ ಪಂಪ್‌ವೆಲ್‌ ಗೆ ಸಾಗುವ ಹೆದ್ದಾರಿಯ ದುಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಹಲವಾರು ದೊಡ್ಡ ಗುಂಡಿಗಳು ಇರುವುದರಿಂದ ದಿನಕ್ಕೊಂದು ಅಪಘಾತ ಸಂಭವಿಸುವಂತಹ ಪರಿಸ್ಥಿತಿಯಿದೆ ಎಂದು ಸ್ಥಳೀಯರು ದೂರಿದ್ದಾರೆ.

error: Content is protected !!
Scroll to Top