(ನ್ಯೂಸ್ ಕಡಬ) newskadaba.com ಸೆ. 08. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ 2026ನೇ ಸಾಲಿನಲ್ಲಿ ಚೀನಾದ ಶಾಂಘೈನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಗೆ (World Skill Competition – 2026) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಒಲಿಂಪಿಕ್ಸ್ (‘ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ ಕರ್ನಾಟಕ – 2025’) ಸ್ಪರ್ಧಾ ಕಾರ್ಯಕ್ರಮವನ್ನು 63 ಪ್ರಕಾರದ ಕೌಶಲ್ಯ ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದೆ.
2001 ಜನವರಿ 1 ರಂದು ಅಥವಾ ನಂತರದಲ್ಲಿ ಜನಿಸಿದ ಅಭ್ಯರ್ಥಿಗಳಿಗೆ 63 ಪ್ರಕಾರದ ಕೌಶಲ್ಯ ವಿಭಾಗಗಳಲ್ಲಿ ಹಾಗೂ ದಿನಾಂಕ 2004 ಜನವರಿ 1 ರಂದು ಅಥವಾ ನಂತರದಲ್ಲಿ ಜನಿಸಿದ ಅಭ್ಯರ್ಥಿಗಳಿಗೆ 50 ಪ್ರಕಾರದ ಕೌಶಲ್ಯ ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಕೌಶಲ್ಯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದವರಿಗೆ ನಿರಂತರ ತರಬೇತಿಯನ್ನು ನಿಗಮದ ವತಿಯಿಂದ ಒದಗಿಸಲಾಗುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿಗಳು https://www.skillindiadigital.gov.in/home ವೆಬ್ ಸೈಟ್‍ನಲ್ಲಿ ಉಚಿತವಾಗಿ ನೋಂದಾವಣೆ ಮಾಡಬಹುದು. ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 919606492216 ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













