(ನ್ಯೂಸ್ ಕಡಬ) newskadaba.com ಸೆ. 01. ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಕನಿಷ್ಟ 20 ಮಂದಿ ಮೃತಪಟ್ಟಿರುವ ಕುರಿತು ಭಾನುವಾರ ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ನೆಲದಿಂದ 160 ಕಿಲೋಮೀಟರ್ ಆಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಬಿಬಿಸಿ ವರದಿಯ ಪ್ರಕಾರ, ಇಲ್ಲಿಯವರೆಗೆ 20 ಜನರು ಮರತಪಟ್ಟಿದ್ದಾರೆ. ಈ ಭೂಕಂಪದ ಕಂಪನಗಳು ಪಾಕಿಸ್ತಾನದ ಇಸ್ಲಾಮಾಬಾದ್ ಮತ್ತು ಅಬೋಟಾಬಾದ್ ವರೆಗೆ ಅನುಭವಕ್ಕೆ ಬಂದಿವೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭಾರತೀಯ ಸಮಯ ಬೆಳಗಿನ ಜಾವ 12:47 ಕ್ಕೆ ಭೂಕಂಪ ಸಂಭವಿಸಿದೆ. ಇದರ ನಂತರ, ನಿರಂತರ ಕಂಪನಗಳು ಸಹ ಅನುಭವಕ್ಕೆ ಬಂದಿವೆ. ಇವುಗಳಲ್ಲಿ 140 ಕಿಲೋಮೀಟರ್ ಆಳದಲ್ಲಿ 4.7 ಮತ್ತು 4.3 ತೀವ್ರತೆಯ ಕಂಪನಗಳು ಮತ್ತು 40 ಕಿಲೋಮೀಟರ್ ಆಳದಲ್ಲಿ 5.0 ತೀವ್ರತೆಯ ಕಂಪನ ಸಂಭವಿಸಿದೆ.














