ಈ 8 ಮಾತ್ರೆಗಳನ್ನು ಉಪಯೋಗಿಸದಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸೂಚನೆ



(ನ್ಯೂಸ್ ಕಡಬ) newskadaba.com ಸೆ. 01. ಉತ್ತಮ ಗುಣಮಟ್ಟವಲ್ಲವೆಂದು 8 ಮಾತ್ರೆಗಳನ್ನು ಉಪಯೋಗಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಪ್ರಕಟನೆ ಹೊರಡಿಸಿದೆ.







ವರದಿಯ ಪ್ರಕಾರ, ಹೆಲ್ತಿ ಲೈಫ್ ಫಾರ್ಮಾ ಪ್ರೈ. ಲಿಮಿಟೆಡ್‍ ನ ಕ್ಯಾಲ್ಸಿಯಂ ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ, ಭವ್ಯ ಇಂಡಸ್ಟ್ರೀಸ್‍ ನ ಆಕ್ಟಿವ್ ಅಲೂವೆರಾ ಮತ್ತು ನಿಮ್ ಸೋಪ್, ರಾಜ್‍ದೀಪ್ ಫಾರ್ಮಸ್ಯೂಟಿಕಲ್ಸ್‌ ಲೈಫೋಜೆಸಿಕ್, ಮೈಕ್ರೋ ಫಾರ್‌ ಮುಲೇಷನ್ಸ್‌ ನ ಅಮೋಕ್ಸಿಲಿನ್ ಮತ್ತು ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ, ಫಾರ್ಮಾಕೇರ್‌ ನ ಮೆಗ್ನೀಷಿಯಂ ಸಲ್ಫೇಟ್ ಪಾಸ್ಫೇಟ್ ಬಿಪಿ, ಡ್ಯಾಫೋಹಿಲ್ಸ್ ಲ್ಯಾಬೋರೇಟರಿಸ್ ಪ್ರೈ. ಲಿಮಿಟೆಡ್‍ನ ಅಡಾಲ್ಪ್ಮಾಮ್ ಎಂಆರ್, ಮೆಡಿಸಿಸ್ ಬಯೋಟೆಕ್ ಪ್ರೈ. ಲಿಮಿಟೆಡ್‍ ನ ಫೆರೋಸ್ ಅಸ್ಕ್ರೋಬೇಟ್, ಪಾಲಿಕ್ ಆಸಿಡ್ ಮತ್ತು ಜಿಂಕ್ ಸಲ್ಫೇಟ್ ಟ್ಯಾಬ್ಲೆಟ್‍ ಗಳನ್ನು(ಆಲ್ಟೊಫರ್-ಎಕ್ಸ್‌ ಟಿ ಟ್ಯಾಬ್ಲೆಟ್ಸ್) ಉಪಯೋಗಿಸದಂತೆ ತಿಳಿಸಿದೆ.






ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬೇಕು ಎಂದು ಇಲಾಖೆಯು ತಿಳಿಸಿದೆ.

error: Content is protected !!
Scroll to Top