(ನ್ಯೂಸ್ ಕಡಬ) newskadaba.com ಸೆ.01. ಇಂದು ಬೆಳಗ್ಗೆಯಷ್ಟೇ ಜನರಿಗೆ ಎಲ್ಪಿಜಿ ದರ ಇಳಿಕೆಯ ಗುಡ್ ನ್ಯೂಸ್ ಸಿಕ್ಕಿತ್ತು. ಇದೀಗ ಇದರ ಬೆನ್ನಲ್ಲೇ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದ್ದು, ತಲೆ ಗಿರ್ ಅನ್ನುವಷ್ಟು ಚಿನ್ನದ ಬೆಲೆ ಹೆಚ್ಚಳವಾಗಿದೆ.
ಚಿನ್ನವನ್ನು ಸುರಕ್ಷಿತ ಹೂಡಿಕೆ ಮತ್ತು ಆಪತ್ಕಾಲದ ನೆಂಟ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆ ದರ ಎಷ್ಟೇ ಏರಿಕೆಯಾದ್ರೂ ಚಿನ್ನದ ಬೇಡಿಕೆ ಮಾತ್ರ ಕಡಿಮೆಯಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆಯೂ ಹೆಚ್ಚಾಗುತ್ತಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,705 ರೂಪಾಯಿ
8 ಗ್ರಾಂ: 77,640 ರೂಪಾಯಿ
10 ಗ್ರಾಂ: 97,050 ರೂಪಾಯಿ
100 ಗ್ರಾಂ: 9,70,500 ರೂಪಾಯಿ













