ವಿವಾಹಿತೆ ಆತ್ಮಹತ್ಯೆ..!

(ನ್ಯೂಸ್‌ ಕಡಬ) newskadaba.com ಆ. 29. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸುದ್ಧಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಹುಬ್ಬಳ್ಳಿಯ ಬಸಯ್ಯ ಮತ್ತು ಶಾರದಾ ದಂಪತಿಯ ಮಗಳಾದ ಶಿಲ್ಪಾ, 2022ರ ಡಿಸೆಂಬರ್‌ ನಲ್ಲಿ ಪ್ರವೀಣ್‌ ಎಂಬಾತನನ್ನು ವಿವಾಹವಾಗಿದ್ದರು. ಮದುವೆಯ ನಂತರ ಶಿಲ್ಪಾ, ಪತಿ ಪ್ರವೀಣ್‌ ಜತೆ ಬಿಟಿಎಂ ಲೇಔಟ್‌ ಒಂದನೇ ಹಂತದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇವರಿಗೆ ಒಂದು ಮಗು ಸಹ ಇದ್ದು, ಜೊತೆಗೆ ಗರ್ಭಿಣಿ ಕೂಡಾ ಆಗಿದ್ದರು. ಸಾಫ್ಟ್‌ ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದ ಪ್ರವೀಣ್‌ 2023ರಲ್ಲಿ ಕೆಲಸ ಬಿಟ್ಟು ಪಾನಿಪೂರಿ ವ್ಯಾಪಾರ ಆರಂಭಿಸಿದ್ದ. ಆದರೆ ಹೆಂಡತಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಳಿಯ ಪ್ರವೀಣ್‌ ಮತ್ತು ಆತನ ತಾಯಿಯ ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಿಲ್ಪಾ ಕುಟುಂಬಿಕರು ಆರೋಪಿಸಿದ್ದಾರೆ.

 

 

Scroll to Top