ಕಪಿಲ್‌ ಶರ್ಮಾ ಕೆಫೆ ಮೇಲೆ ಮತ್ತೆ ಅಟ್ಯಾಕ್‌



(ನ್ಯೂಸ್‌ ಕಡಬ) newskadaba.com, ಆ.08: ನವದೆಹಲಿ: ಹಾಸ್ಯ ನಟ ಕಪಿಲ್ ಶರ್ಮಾ ಅವರ ಕೆಫೆ ಮೇಲೆ ಮತ್ತೆ ದಾಳಿ ನಡೆದಿದೆ. ಏಕಾಏಕಿ ಕೆಫೆಗೆ ನುಗ್ಗಿದ 25ಜನರ ತಂಡ ಗುಂಡಿನ ದಾಳಿ ನಡೆಸಿದೆ. ಇನ್ನು ದಾಳಿಯ ಹೊಣೆಯನ್ನು ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಳು ಹೊತ್ತುಕೊಂಡಿವೆ. ಇನ್ನು ದಾಳಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಗುಂಡಿನ ಸದ್ದಿನ ನಡುವೆ ಒಂದು ಧ್ವನಿ ಕೇಳಿಸುತ್ತಿದೆ. ನಾವು ಗುರಿಯಿಟ್ಟಿದ್ದ ವ್ಯಕ್ತಿಗೆ ಕರೆ ಮಾಡಿದ್ದೆವು, ಆತ ಕರೆ ಸ್ವೀಕರಿಸಿರಲಿಲ್ಲ. ಆದ್ದರಿಂದ ನಾವು ಕ್ರಮ ಕೈಗೊಳ್ಳಬೇಕಾಯಿತು. ಅವನಿಗೆ ಇನ್ನೂ ಕರೆ ಕೇಳಿಸದಿದ್ದರೆ, ಮುಂದಿನ ಕ್ರಮವನ್ನು ಶೀಘ್ರದಲ್ಲೇ ಮುಂಬೈನಲ್ಲಿ ತೆಗೆದುಕೊಳ್ಳಲಾಗುವುದು ಎಂದು ಒಬ್ಬ ದಾಳಿಕೋರ ಕಿರುಚಾಡುತ್ತಿರುವುದನ್ನು ಕಾಣಬಹುದಾಗಿದೆ.





ಇನ್ನು ದಾಳಿ ಬೆನ್ನಲ್ಲೇ ಪೊಲೀಸರು ಹೈ ಅಲರ್ಟ್‌ ಆಗಿದ್ದು, ಕಪಿಲ್‌ ಶರ್ಮಾ ಅವರ ಮನೆ ಮತ್ತು ಶೂಟಿಂಗ್‌ ಸೆಟ್‌ ಸುತ್ತಲೂ ಬಿಗಿ ಭದ್ರತೆ ಘೋಷಿಸಲಾಗಿದೆ.






error: Content is protected !!
Scroll to Top