ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ..



(ನ್ಯೂಸ್‌ ಕಡಬ) newskadaba.com, ಆ.05: ಕೆಲವರ ಮನೆಯಲ್ಲಿ ಸಿಕ್ಕಾಪಟ್ಟೆ ಇಲಿಗಳಿರುತ್ತವೆ. ಇಲಿಗಳ ಕಾಟದಿಂದ ಬೇಸತ್ತು ಹೆಚ್ಚಿನವರು ಮನೆಯಲ್ಲಿ ಬೆಕ್ಕು ಸಾಕುವುದೋ ಅಥವಾ ವಿಷವಿಟ್ಟು ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಯತ್ನಿಸುತ್ತಾರೆ. ಇಲಿಗಳ ಕಾಟದಿಂದ ಮುಕ್ತಿ ಹೊಂದಲು ಇಲ್ಲಿವೆ ಕೆಲವು ಸಲಹೆಗಳು.





ಇಲಿಗಳನ್ನು ಓಡಿಸಲು ಕರ್ಪೂರ ಪರಿಣಾಮಕಾರಿಯಾಗಿದೆ. ಮನೆಯ ಪ್ರತಿಯೊಂದು ಮೂಲೆಯಲ್ಲಿ ಕರ್ಪೂರವನ್ನು ಇರಿಸಿ ಅಥವಾ ಕರ್ಪೂರವನ್ನು ಸುಟ್ಟು ಅದರ ಹೊಗೆಯನ್ನು ಹರಡಿಸಿ ಮೂಲಕ ಇಲಿಗಳ ಕಾಟದಿಂದ ಪಾರಾಗಬಹುದು.






ಮನೆಯಲ್ಲಿ ಇಲಿಗಳು ಓಡಾಡುವ ಸ್ಥಳಗಳಲ್ಲಿ 8-10 ಪಲಾವ್ಎಲೆಗಳನ್ನು ಇಡಿ. ಇದರ ವಾಸನೆಗೆ ಇಲಿಗಳು ನಿಮ್ಮ ಮನೆಯ ಪಕ್ಕ ಸುಳಿಯಲ್ಲ.

ದಾಲ್ಚಿನ್ನಿ ಪುಡಿಯನ್ನು ಮನೆಯ ಪ್ರತಿಯೊಂದು ಮೂಲೆಯಲ್ಲಿ ಇರಿಸಿ, ಇದರೆ ವಾಸನೆಗೆ ಇಲಿಗಳು ಓಡಿ ಹೋಗುತ್ತವೆ.

ಬೆಳ್ಳುಳ್ಳಿ ಹಾಗೂ ಕರಿಮೆಣಸನ್ನು ಪುಡಿ ಮಾಡಿ ಬಳಿ ಉಂಡೆ ತಯಾರಿಸಿ ಇಲಿಗಳು ಹೆಚ್ಚು ಓಡಾಡುವ ಸ್ಥಳದಲ್ಲಿ ಇಟ್ಟುಬಿಡಿ.

ಮನೆಯಲ್ಲಿ ಇಲಿಗಳು ಓಡಾಡುವ ಸ್ಥಳದಲ್ಲಿ ಪುದೀನಾ ಎಲೆ ಹಾಗೂ ಲವಂಗವನ್ನು ಹರಡಿ. ಇದರ ಕಟು ವಾಸನೆಗೆ ಇಲಿಗಳು ಓಡಿ ಹೋಗುತ್ತವೆ.

error: Content is protected !!
Scroll to Top