ಇನ್ಮುಂದೆ ಲೇಡಿಸ್ ಬಾರ್ ಗಳ ಪ್ರತಿದಿನ ವಿಡಿಯೋ ತುಣುಕನ್ನು ಆಯಾ ಠಾಣೆಗಳಿಗೆ ನೀಡುವಂತೆ ಸೂಚನೆ..!



(ನ್ಯೂಸ್ ಕಡಬ) newskadaba.com ಜು. 05. ಹಲವು ಬಾರ್ ಗಳಲ್ಲಿ ನಿಯಮ ಉಲ್ಲಂಘನೆ ಕುರಿತು ಆರೋಪಗಳು ಕೇಳಿಬರುವ ಹಿನ್ನೆಲೆ ಇನ್ಮುಂದೆ ನಗರದಲ್ಲಿರುವ ಲೇಡಿಸ್ ಬಾರ್‌ಗಳು ಪ್ರತಿದಿನ ಸಿಸಿಟಿವಿ ವಿಡಿಯೋಗಳ ತುಣುಕುಗಳನ್ನು ಆಯಾಯ ಪೊಲೀಸ್ ಠಾಣೆಗಳಿಗೆ ನೀಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಸೂಚಿಸಿರುವುದಾಗಿ ತಿಳಿದುಬಂದಿದೆ. .





ಇತ್ತೀಚೆಗೆ ನಗರ ಪೊಲೀಸರು ಕೇಂದ್ರ ಹಾಗೂ ಪಶ್ಚಿಮ ವಿಭಾಗದ ಲೇಡಿಸ್ ಬಾರ್‌ಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕೆಲವು ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಿತ್ತು. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಕ್ರಮ ವಹಿಸಿರಲಿಲ್ಲ. ಹಾಗಾಗಿ ಇದೀಗ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಸಿಸಿಬಿ ಪೊಲೀಸರು ಹೊಸ ನಿಯಮಕ್ಕೆ ಮುಂದಾಗಿದ್ದಾರೆ.






ಅದರಂತೆ ಬಾರ್ ಗಳ ಪ್ರತಿದಿನದ ಸಿಸಿಟಿವಿ ವಿಡಿಯೋ ತುಣುಕನ್ನು ಪೆನ್‌ ಡ್ರೈವ್ ಅಥವಾ ಸಿಡಿಗೆ ಹಾಕಿ ಪೊಲೀಸ್ ಠಾಣೆಗಳಿಗೆ ನೀಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಅಂತಹ ಲೇಡಿಸ್ ಬಾರ್‌ಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

error: Content is protected !!
Scroll to Top