(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ರಾಜ್ಯಾದ್ಯಂತ ಬ್ಯಾಟರಿ ಚಾಲಿತ ಆಟೋ, ಟ್ಯಾಕ್ಸಿ ಸಹಿತ ವಾಣಿಜ್ಯ ಉದ್ದೇಶದ ಇ-ವಾಹನಗಳಿಗೆ ಪರವಾನಿಗೆ ಕಡ್ಡಾಯಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.
ಇಲೆಕ್ಟ್ರಿಕ್ ವಾಹನಗಳಿಗೆ 2022ರಿಂದ ಈವರೆಗೆ ಯಾವುದೇ ಪರ್ಮಿಟ್ ಗಳ ಅವಶ್ಯಕತೆ ಇರಲಿಲ್ಲ. ಇದರಿಂದಾಗಿ ಇ-ಆಟೋ ಮತ್ತು ಟ್ಯಾಕ್ಸಿಯವರು ಎಲ್ಲೆಂದರಲ್ಲಿ ಬಾಡಿಗೆ ಮಾಡುವುದು ಸಾಧ್ಯವಾಗಿತ್ತು. ಇದರ ವಿರುದ್ದ ಕರಾವಳಿಯಲ್ಲಿ ಆಟೋ ಚಾಲಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.
ಸಾರಿಗೆ ಇಲಾಖೆಯ ಪ್ರಸ್ತುತ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ಬ್ಯಾಟರಿ ಚಾಲಿತ ಹಾಗೂ ಮೆಥನಾಲ್ ಮತ್ತು ಎಥನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ಪರ್ಮಿಟ್ ಪಡೆಯುವುದರಿಂದ ವಿನಾಯಿತಿ ನೀಡಿ ಹೊರಡಿಸಲಾಗಿದ್ದ 20.1.2022ರ ಆದೇಶವನ್ನು ಹಿಂಪಡೆಯಲಾಗಿದೆ. ಅಲ್ಲದೇ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸದಾಗಿ ನೋಂದಣಿಯಾಗುವ ಹಾಗೂ ಈಗಾಗಲೇ ನೋಂದಣಿಯಾಗಿ ರಹದಾರಿ ಇಲ್ಲದೇ ಸಂಚರಿಸುತ್ತಿರುವ ಎಲ್ಲ ವಾಹನಗಳು ಶುಲ್ಕ ರಹಿತವಾಗಿ ರಹದಾರಿ ಪಡೆಯಬೇಕಿದೆ.













