ರೈಲಿನಲ್ಲಿ ಒಣಕೊಬ್ಬರಿ ತೆಗೆದುಕೊಂಡು ಹೋದರೆ ದಂಡ, ಜೈಲು ಫಿಕ್ಸ್..?



(ನ್ಯೂಸ್ ಕಡಬ) newskadaba.com ಜು. 02.  ರೈಲ್ವೇ ಇಲಾಖೆಯು ತನ್ನ ಪ್ರಯಾಣಿಕರಿಗೆ ರೈಲಿನಲ್ಲಿ ಯಾವ ವಸ್ತುಗಳನ್ನು ಕೊಂಡೊಯ್ಯಬಾರದು, ಯಾವುದನ್ನು ಕೊಂಡೊಯ್ಯಬಹುದು, ಎಷ್ಟು ಮಿತಿ ಇರಬೇಕು ಎಂಬೆಲ್ಲಾ ಕೆಲವೊಂದು ನಿಯಮಗಳನ್ನು ವಿಧಿಸಿ, ಜಾರಿಗೆ ತಂದಿದೆ. ಅದರಂತೆಯೇ ಒಣಕೊಬ್ಬರಿಯನ್ನು ಕೂಡ ರೈಲಿನಲ್ಲಿ ಕೊಂಡೊಯ್ಯಬಾರದು ಎಂಬ ನಿಯಮವಿದ್ದು, ಒಂದು ವೇಳೆ ನೀವು ತೆಗೆದುಕೊಂಡು ಹೋದಲ್ಲಿ ಜೈಲು ಶಿಕ್ಷೆ ಫಿಕ್ಸ್ ಎಂದು ನಿಯಮ ಹೇಳುತ್ತದೆ.







 

ಭಾರತೀಯ ರೈಲ್ವೆಯು ಪ್ರಯಾಣಿಕರ ಸುರಕ್ಷತಾ ಹಿತದೃಷ್ಟಿಯಿಂದ ಕೆಲವೊಂದು ವಸ್ತುಗಳನ್ನು ರೈಲು ಪ್ರಯಾಣದ ವೇಳೆ ಬಳಸದಂತೆ ಸೂಚಿಸುತ್ತದೆ. ಮತ್ತೆ ಕೆಲವು ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗುವುದಕ್ಕೂ ನಿಷಿದ್ಧಗೊಂಡಿದ್ದು, ದಂಡಕ್ಕೂ ಇದು ದಾರಿಯಾಗುತ್ತದೆ. ಅಂತಹ ಕೆಲವು ವಸ್ತುಗಳಲ್ಲಿ ಒಣ ಕೊಬ್ಬರಿ ಕೂಡ ಒಂದಾಗಿದೆ.






ರೈಲ್ವೆ ನಿಯಮಗಳ ಪ್ರಕಾರ ಸ್ಟೌವ್‌ಗಳು, ಗ್ಯಾಸ್ ಸಿಲಿಂಡರ್‌ಗಳು, ರಾಸಾಯನಿಕಗಳು, ಪಟಾಕಿ, ಚರ್ಮ ಅಥವಾ ಒದ್ದೆಯಾದ ಚರ್ಮ, ಗ್ರೀಸ್, ಸಿಗರೇಟ್ ಮತ್ತು ಸ್ಫೋಟಕಗಳಂತಹ ವಸ್ತುಗಳನ್ನು ರೈಲುಗಳಲ್ಲಿ ಸಾಗಿಸಬಾರದು. ಅದರಲ್ಲೂ ಒಣ ಕೊಬ್ಬರಿಯು ಸುತ್ತಲೂ ಒಣಗಿರುವ ನಾರಿನ ಪದಾರ್ಥ ಹೊಂದಿರಲಿದ್ದು, ಒಮ್ಮೆ ಇದಕ್ಕೆ ಬೆಂಕಿ ತಗುಲಿದರೆ ಅದರನ್ನು ನಂದಿಸುವುದು ಬಹಳ ಕಷ್ಟ, ಹೀಗಾಗಿ ಒಣ ಕೊಬ್ಬರಿಯನ್ನ ತೆಗೆದುಕೊಂಡು ಹೋಗುವುದನ್ನು ನಿಷೇಧವಾಗಿದೆ.

error: Content is protected !!
Scroll to Top