(ನ್ಯೂಸ್ ಕಡಬ) newskadaba.com ಜೂ.28: ಇತ್ತೀಚಿನ ದಿನಗಳಲ್ಲಿ ಬಂಗಾರದ ದರ ನೋಡಿದರೆ ಯಾರು ಖರೀದಿ ಮಾಡಲು ಮುಂದಾಗುವುದಿಲ್ಲ. ಆದರೆ ಮದುವೆಯಂತಹ ಕೆಲ ಅವಶ್ಯಕತೆ ಬಂದರೆ ಚಿನ್ನವನ್ನು ಖರೀದಿ ಮಾಡಲೇ ಬೇಕಾಗುತ್ತದೆ.
ಎಲ್ಲರನ್ನು ಬಂಗಾರ, ಬೆಳ್ಳಿ ಆಕರ್ಷಣೆ ಮಾಡಿದರೂ ಅವುಗಳ ಬೆಲೆಗಳಿಂದ ಗ್ರಾಹಕರು ದಂಗಾಗುತ್ತಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಚಿನ್ನ, ಬೆಳ್ಳಿಯ ಬೆಲೆ ಎಷ್ಟು ಇಳಿಕೆ ಆಗಿದೆ?.
ದಿನದಿಂದ ದಿನಕ್ಕೆ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಿತ್ತು. ಆದರೆ ಇಂದು ಬಂಗಾರ ದರದಲ್ಲಿ ಇಳಿಕೆ ಕಂಡಿದ್ದು ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಇದ್ದಂತಹ ಬೆಲೆ ನಾಳೆ ಇರುವುದಿಲ್ಲ. ಒಂದೇ ಬಾರಿ 550 ರಿಂದ 600 ರೂಪಾಯಿಯಷ್ಟು ಇಳಿಕೆ ಆಗಿದೆ. ಚಿನ್ನದ ಅವಶ್ಯಕತೆ ಇರುವವರು ಈಗಲೇ ಖರೀದಿ ಮಾಡಬಹುದು.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,850 ರೂ., 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,020 ರೂ., 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,520 ರೂ ಇದೆ.
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹107.80 ಇದೆ. ಇದು ನಿನ್ನೆ ₹107.90 ಇತ್ತು. ಬೆಲೆಯಲ್ಲಿ 10 ಪೈಸೆ ಕಡಿಮೆ ಆಗಿದೆ. ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹1,078 ಇದ್ದು ನಿನ್ನೆ ಇದರ ಬೆಲೆ ₹1,079 ಇತ್ತು. ಹೀಗಾಗಿ ಬೆಳ್ಳಿಯ ಬೆಲೆಯಲ್ಲಿ 1 ರೂಪಾಯಿ ಇಳಿಕೆ ಆಗಿದೆ.













