ಭದ್ರತಾ ಕಾಳಜಿಯಿಂದ ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್..!



(ನ್ಯೂಸ್ ಕಡಬ) newskadaba.com ಜೂ. 27. ಭದ್ರತಾ ಕಾಳಜಿಯಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಕಪ್ಪು ಬಣ್ಣದ ಸಂಪೂರ್ಣ ಬುಲೆಟ್‌ ಪ್ರೂಫ್ ಕಾರನ್ನು ಖರೀದಿ ಮಾಡಿದ್ದಾರೆ.





 

ಸಲ್ಮಾನ್ ಖಾನ್ ಅವರು ಖರೀದಿಸಿರುವ ಮರ್ಸಿಡೀಸ್ ಮೇಬ್ಯಾಕ್ ಜಿಎಸ್‌ಎಲ್ 600 ಎಸ್‌ಯುವಿ ಕಾರಿನ ಬೆಲೆ 3.4 ಕೋಟಿ ರೂ. ನಿಂದ ಆರಂಭವಾಗುತ್ತದೆ. ಕಾರಿನ ಒಳಗಡೆ ತನಗೆ ಬೇಕಾದಂತೆ ವಿನ್ಯಾಸ ಮಾಡಿದ್ದರಿಂದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.






 

ಕೃಷ್ಣಮೃಗ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯಿದ್ದು, ಹಲವು ಬಾರಿ ಅವರ ಮನೆ ಮೇಲೂ ಗುಂಡಿನ ದಾಳಿ ನಡೆದಿತ್ತು. ಕ್ರಮೇಣ ಅವರಿಗೆ ಜೀವ ಬೆದರಿಕೆ ಕರೆಗಳು ಬರಲು ಪ್ರಾರಂಭವಾಯಿತು. ಈ ಹಿನ್ನೆಲೆ ಸಲ್ಮಾನ್ ಖಾನ್‌ಗೆ ಸರ್ಕಾರದಿಂದಲೇ ವೈ+ ಭದ್ರತೆಯನ್ನು ನೀಡಲಾಗಿದೆ. ಈ ನಡುವೆ ಇನ್ನೂ ಹೆಚ್ಚಿನ ಭದ್ರತೆಗಾಗಿ ಸಲ್ಮಾನ್ ಖಾನ್ ಹೊಸದಾದ ಬುಲೆಟ್‌ ಪ್ರೂಫ್ ಕಾರನ್ನು ಖರೀದಿಸಿದ್ದಾರೆ.

error: Content is protected !!
Scroll to Top