ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತ ಸರ್ಕಾರಿ ಬಸ್ ಚಾಲನೆ; ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ



(ನ್ಯೂಸ್ ಕಡಬ) newskadaba.com ಜ.28: ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಲೇ ಚಾಲಕ ಸರ್ಕಾರಿ ಬಸ್ ಚಲಾಯಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಬಸ್‌ನಲ್ಲಿ ಹತ್ತಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರೂ, ಸರ್ಕಾರಿ ಬಸ್ ಚಾಲಕ ನಿರ್ಲಕ್ಷ್ಯದಿಂದ ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿದ್ದಾನೆ. ಬಸ್‌ನಲ್ಲಿ ಪ್ರಯಾಣಿಕರಿದ್ದಾರೆ ಎಂಬುದನ್ನು ಮರೆತು, ಮೊಬೈಲ್ ನೋಡುವುದರಲ್ಲಿ ಮುಳುಗಿದ್ದು, ಪ್ರಯಾಣಿಕರು ಚಾಲಕನ ವರ್ತನೆಯಿಂದ ರೋಸಿ ಹೋಗಿದ್ದಾರೆ.







ಈ ವೇಳೆ ಪ್ರಯಾಣಿಕರೊಬ್ಬರು ಚಾಲಕ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತ ಬಸ್ ಚಲಾಯಿಸುತ್ತಿರುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಲಾರದಿಂದ ಪಾವಗಡ ಮಾರ್ಗದ ಬಸ್ ಚಾಲಕ ಈ ರೀತಿ ನಿರ್ಲಕ್ಷ್ಯದಿಂದ ವರ್ತಿಸಿದ್ದಾನರ. ಇನ್ನು ಚಾಲಕನ ನಿರ್ಲಕ್ಷ್ಯದ ವರ್ತನೆಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






error: Content is protected !!
Scroll to Top