ಕಾರ್ಕಳ: ನಕಲಿ ಪರಶುರಾಮ ಮೂರ್ತಿ ಕೇಸ್: ಮೇಲ್ಮನವಿ ತಿರಸ್ಕಾರಿಸಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com .22 ನವದೆಹಲಿ:  ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್ ರವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ವಜಾಗೊಳಿಸಲು ರಾಜ್ಯ ಹೈಕೋಟ್೯ ನಿರಾಕರಿಸಿದೆ.

ಕೃಷ್ಣ ಶೆಟ್ಟಿ ಯವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣದ ವಿರುದ್ಧ ಕೃಷ್ ಆರ್ಟ್ ವರ್ಲ್ಡ್ ನ ಕೃಷ್ಣ ನಾಯಕ್ ರವರು ರಾಜ್ಯ ಹೈಕೋಟ್೯ನಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಇಂದು ತಿರಸ್ಕಾರ ಮಾಡಿ ಆದೇಶ ಹೊರಡಿಸಿದೆ.

Also Read  ಸುಳ್ಯ: ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಸಚಿವ ಎಸ್.ಅಂಗಾರ ಚಾಲನೆ

error: Content is protected !!
Scroll to Top