(ನ್ಯೂಸ್ ಕಡಬ) newskadaba.com, ಮೇ.23: ಅಮೆರಿಕ- ಹಾಗೂ ಇರಾನ್ ಸಂಘರ್ಷ ಹಿನ್ನೆಲೆ, ಕಚ್ಚಾ ತೈಲ ಬೆಲೆ ಏರುತ್ತಲೇ ಇದ್ದು, ಹಣದುಬ್ಬರದ ಭೀತಿ ಹೆಚ್ಚಾಗಿದೆ. ಪರಿಣಾಮವಾಗಿ ಅಮೂಲ್ಯ ಲೋಹಗಳ ಬೆಲೆ ಮೇಲೆ ಒತ್ತಡ ಸೃಷ್ಟಿಯಾಗಿದ್ದು, ಚಿನ್ನದ ಬೆಲೆಯಲ್ಲಿ ಕಡಿತ ಆಗಿದೆ…
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಮೇ 23 2026 ಶನಿವಾರದಂದು, 24 ಕ್ಯಾರೆಟ್ 10 ಗ್ರಾಂ ನಲ್ಲಿ 430 ರೂ ಇಳಿಕೆ ಆಗಿ 1,59,060 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 43 ರೂ ಇಳಿಕೆ ಆಗಿದ್ದು, 15,906 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 40 ರೂ ಇಳಿಕೆ ಆಗಿ 1 ಗ್ರಾಂ ಬೆಲೆ 14,580 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 400 ರೂ ಇಳಿಕೆಯಾಗಿ 10 ಗ್ರಾಂ ಗೆ 1,45,800 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ತಟಸ್ಥ
ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. 285 ರೂ ಗ್ರಾಂ ಬೆಲೆಯಾಗಿದ್ದು, ಗುರುವಾರದ ಬೆಲೆಯೇ ಮುಂದುವರಿದಿದೆ. ಕೆಜಿ ಬೆಲೆ, 2.85 ಲಕ್ಷ ರೂಪಾಯಿ ಆಗಿದೆ.









