(ನ್ಯೂಸ್ ಕಡಬ) newskadaba.com ಡಿ.12: ಕೇರಳದಲ್ಲಿ ನಡೆದಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶ ಶನಿವಾರ ಹೊರ ಬೀಳಲಿದೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಹೊರ ಬೀಳಲಿದೆ.
ಮತ ಎಣಿಕೆಗೆ 9 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಗುರುವಾರ ಕಾಸರಗೋಡು ಜಿಲ್ಲೆಯ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. 74.89 ಶೇಕಡಾ ಮತದಾನವಾಗಿತ್ತು. 11,12,190 ಮತದಾರರಲ್ಲಿ 8,32,894 ಮಂದಿ ಹಕ್ಕು ಚಲಾಯಿಸಿದ್ದರು. ಈ ಪೈಕಿ 3,75,959 ಮಂದಿ ಪುರುಷರು, 4,56,933 ಮಹಿಳೆಯರು ಮತಚಲಾಯಿಸಿದ್ದಾರೆ. ಇಬ್ಬರು ಮಂಗಳ ಮುಖಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲಾ ಪಂಚಾಯತ್ ನ 16 ಡಿವಿಜನ್, ಆರು ಬ್ಲಾಕ್ ಪಂಚಾಯತ್, 3 ನಗರಸಭೆ ಹಾಗೂ 38 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿತ್ತು. ನಗರಸಭೆಯ 3 ಹಾಗೂ ಬ್ಲಾಕ್ ಪಂಚಾಯತ್ ನ 6 ಕೇಂದ್ರಗಳು ಸೇರಿದಂತೆ ಒಟ್ಟು 9 ಮತ ಎಣಿಕಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.








