ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಭಾರೀ ಏರಿಕೆ ಕಂಡ ಚಿನ್ನದ ಬೆಲೆ



(ನ್ಯೂಸ್‌ ಕಡಬ) newskadaba.com ಡಿ.12 : ಬಹುಶಃ ನಿರಂತರವಾಗಿ ಏರಿಕೆಯಾಗುತ್ತಿರುವ ಪ್ರಪಂಚದ ಏಕೈಕ ವಸ್ತು ಚಿನ್ನ ಎನಿಸುತ್ತದೆ. ಹಾಗೆಯೇ ದುಡ್ಡಿನ ಬಳಿಕ ಜಗತ್ತಿನಲ್ಲಿ ಅತಿ ಹೆಚ್ಚು ಜನ ಇಷ್ಟಪಡುವ ವಸ್ತು ಕೂಡ ಚಿನ್ನ ಎನಿಸುತ್ತದೆ. ಅಲ್ಲದೆ ಹೂಡಿಕೆಗೆ ಜನ ಅತ್ಯಂತ ಹೆಚ್ಚು ನಂಬುವುದು ಕೂಡ ಬಂಗಾರವನ್ನು ಎನಿಸುತ್ತದೆ. ಇಲ್ಲದಿದ್ದರೆ ಚಿನ್ನ ಈ ಪರಿ ಏರಿಕೆಯಾಗುತ್ತಿತ್ತೆ? ಬಹಳ ಹಿಂದಿನ ಮಾತು ಬಿಡಿ, 2025ರ ಡಿಸಂಬರ್ ವೇಳೆಗೆ 24 ಕ್ಯಾರಟ್ ಚಿನ್ನ 10 ಗ್ರಾಂಗೆ 1,30,000 ರೂಪಾಯಿ ಇತ್ತು. 2026ರಲ್ಲಿ ಇದೇ 24 ಕಾರಟ್ 10 ಬಂಗಾರದ ಬೆಲೆ 1.60,000 ರೂಪಾಯಿ ಆಗುವ ಸಾಧ್ಯತೆ ಇದೆ ..





2026ರಲ್ಲಿ 24 ಕಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,60,000 ರೂಪಾಯಿ ಆಗುತ್ತದೆ ಎನ್ನುವುದು ಅಂದಾಜಲ್ಲ.  ಬದಲಿಗೆ ಮಾರುಕಟ್ಟೆ ತಜ್ಞರ ಅಭಿಪ್ರಾಯ. ಮಾರುಕಟ್ಟೆಯನ್ನು ಅರೆದು ಕುಡಿದಿರುವವರು ಹೀಗೆ ಹೇಳುತ್ತಾರೆ ಎಂದರೆ ಗ್ರಾಹಕರು ಯೋಚನೆ ಮಾಡಲೇಬೇಕು. ಹಾಗೆಯೇ ಇದು ಈಗಾಗಲೇ ಬಂಗಾರವನ್ನು ಕೊಂಡುಕೊಂಡಿರುವವರಿಗೆ ಅಥವಾ ಬಂಗಾರದ ಮೇಲೆ ಹೂಡಿಕೆ ಮಾಡಿರುವವರಿಗೆ ಸಿಹಿ ಸುದ್ದಿ. ಹಾಗೆಯೇ ಇನ್ನು ಚಿನ್ನ ಕೊಳ್ಳಬೇಕು ಎಂದುಕೊಂಡಿರುವವರಿಗೆ ಕಹಿ ಸುದ್ದಿ.






ಚಿನ್ನದ ಬೆಲೆ ಗಗನಮುಖಿ ಆಗಿರುವ ಬಗ್ಗೆ ಬಡ ಗ್ರಾಹಕ ಮಾತ್ರ ಚಿಂತಿತವಾಗಿಲ್ಲ. ಚಿನ್ನದ ಮೇಲೆ ನೂರಾರು ಕೋಟಿ ರೂಪಾಯಿ ಸುರಿದು ವ್ಯಾಪಾರ ಮಾಡುತ್ತಿರುವವರ ತಲೆ ಕೂಡ ಗಿರ್ ಎಂದು ತಿರುಗತೊಡಗಿದೆ. ಏಕೆಂದರೆ ಗೋಲ್ಡ್‌ಮನ್ ಸ್ಯಾಚ್, ಬ್ಯಾಂಕ್ ಆಫ್ ಅಮೇರಿಕ ಹಾಗು ಇನ್ನಿತರ ಅಮೇರಿಕಾದ ಮುಂಚೂಣಿ ಹಣಕಾಸು ಸಂಸ್ಥೆಗಳು 2026ರಲ್ಲಿ ಒಂದು ಔನ್ಸ್ ಬಂಗಾರದ ದರ 5,000 ಡಾಲರ್ (ರೂಪಾಯಿಗಳಲ್ಲಿ 4.2 ಲಕ್ಷ) ತಲುಪಬಹುದು ಎಂದು ಭವಿಷ್ಯ ನುಡಿದಿವೆ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ 10ಗ್ರಾಂ 24 ಕಾರಟ್ ಚಿನ್ನದ ಬೆಲೆ 1,50,000 ರೂಪಾಯಿಗಳಿಂದ 1,60,000 ರೂಪಾಯಿವರೆಗೆ ಹೆಚ್ಚಳ ಆಗಬಹುದು ಎಂದು ಹೇಳಲಾಗುತ್ತಿದೆ.

error: Content is protected !!
Scroll to Top