ಉಡುಪಿ: ಟೆಂಪೋ ಟೈರ್ ಸ್ಫೋಟಗೊಂಡು ಪಲ್ಟಿ ಮಹಿಳಾ ಕಾರ್ಮಿಕರೊಬ್ಬರು ಮೃತ್ಯು- ಹಲವರಿಗೆ ಗಾಯ



(ನ್ಯೂಸ್‌ ಕಡಬ) newskadaba.com,  ಡಿ.12 ಉಡುಪಿ : ಕಾರ್ಮಿಕರು ಮತ್ತು ಕಾಂಕ್ರೀಟ್ ಉಪಕರಣಗಳನ್ನು ಸಾಗಿಸುತ್ತಿದ್ದ ಟೆಂಪೋ ಟೈರ್ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಒಬ್ಬ ಮಹಿಳಾ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದು, ಹಲವು ಮಂದಿಗೆ ಗಾಯಗೊಂಡ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಘಟನೆ ನಡೆದಿದೆ.ಮೃತರನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸಾವಿತ್ರಮ್ಮ, ಮಹಾಂತೇಶ್ ಮತ್ತು ಇತರ 5 ಮಂದಿ ಗಾಯಗೊಂಡಿದ್ದಾರೆ.





ಮೂಲ್ಕಿಯಿಂದ ಉಡುಪಿ ಕಡೆಗೆ ಸಾಗಿಸುತ್ತಿದ್ದ ಟೆಂಪೋ ವಾಹನದಲ್ಲಿ ಪುರುಷರು ಮತ್ತು ಮಹಿಳ ಕಾರ್ಮಿಕರು, ಕಾಂಕ್ರೀಟ್ ಮಿಶ್ರಣ ಯಂತ್ರ ಮತ್ತು ಇತರ ಸಾಮಗ್ರಿಗಳು ಇದ್ದವು. ವಾಹನವು ಅತಿ ವೇಗವಾಗಿ ಚಲಿಸುತ್ತಿದ್ದಾಗ, ಅದರ ಒಂದು ಟೈರ್ ಇದ್ದಕ್ಕಿದ್ದಂತೆ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.ಪಲ್ಟಿಯಾದ ಟೆಂಪೋ ಅಡಿಯಲ್ಲಿ ಹಲವಾರು ಕಾರ್ಮಿಕರು ಸಿಲುಕಿಕೊಂಡಿದ್ದರು, ಮತ್ತು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಯಿತು….






ಒಬ್ಬ ಮಹಿಳೆ ಯಂತ್ರದ ಕೆಳಗೆ ಸಿಲುಕಿಕೊಂಡಿದ್ದರಿಂದ, ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ಆಕೆಯನ್ನು ಹೊರ ತೆಗೆಯಲು ತೀವ್ರ ಪ್ರಯತ್ನ ನಡೆಸಿದರು. ಬಳಿಕ ಹೆಜಮಾಡಿ ಟೋಲ್ ಆಂಬ್ಯುಲೆನ್ಸ್ ಮತ್ತು ಕ್ರೇನ್ ತಕ್ಷಣ ಬಂದು ಮಹಿಳೆಯನ್ನು ರಕ್ಷಿಸಲಾಯಿತು.ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಟೋಲ್ ಆಂಬ್ಯುಲೆನ್ಸ್ ಮೂಲಕ ಮುಕ್ಕಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಅವರು ಸಾವನ್ನಪ್ಪಿದ್ದಾರೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!
Scroll to Top